newsics.com
ನವದೆಹಲಿ: ಕೊರೋನಾ ಸೋಂಕು ತೀವ್ರವಾಗಿದ್ದರೂ 18 ವರ್ಷದೊಳಗಿನ ಮಕ್ಕಳಿಗೆ ಆ್ಯಂಟಿಬಾಡಿ ಔಷಧಗಳನ್ನು ನೀಡದಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.
ಸ್ಟಿರಾಯ್ಡ್ ಬಳಸುವುದಾದರೂ ಅದು 10 ರಿಂದ 14 ದಿನಕ್ಕೆ ಮಾತ್ರ ಸೀಮಿತವಾಗಿರಬೇಕು ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಪುಟ್ಟ ಮಕ್ಕಳು ಅಂದರೆ ಐದು ವರ್ಷದವರೆಗಿನ ಮಕ್ಕಳು ಮಾಸ್ಕ್ ಧರಿಸುಬೇಕಿಲ್ಲ. 6ರಿಂದ 11 ವರ್ಷದ ಮಕ್ಕಳು ಪೋಷಕರ ಮೇಲ್ವಿಚಾರಣೆಯಲ್ಲಿ ಬಳಸಬಹುದು. 12 ವರ್ಷ ಮೀರಿದವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಕೇಂದ್ರದ ಮಾರ್ಗಸೂಚಿ ಹೇಳಿದೆ.
ಒಮೈಕ್ರಾನ್ ಸೋಂಕಿನ ಪರಿಣಾಮ, ತೀವ್ರತೆ ಈಗ ಕಡಿಮೆ ಆಗಿದೆ. ಆದರೂ, ಪ್ರಸ್ತುತ ಏರಿಕೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವುದು ಅಗತ್ಯವಾಗಿದೆ ಎಂದು ಗುರುವಾರ ನಡೆದ ಕೇಂದ್ರ ತಜ್ಞರ ಸಭೆ ಅಭಿಪ್ರಾಯಪಟ್ಟಿದೆ.
1200 ಕೋಟಿ ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಅಭಿವೃದ್ಧಿಗೆ ಕೇಂದ್ರ ಅನುಮೋದನೆ