newsics.com
ಬೆಂಗಳೂರು/ನವದೆಹಲಿ: ಯೋಗ ದಿನದ ಪ್ರಯುಕ್ತ ಕರ್ನಾಟಕದ 4 ಕಡೆ ಸೇರಿ ದೇಶದ 75 ಕಡೆಗಳಲ್ಲಿ ಕೇಂದ್ರ ಸಚಿವರು ಯೋಗಾಭ್ಯಾಸ ನಡೆಸಲಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ 75 ಕಡೆ ಯೋಗ ದಿನ ಆಯೋಜಿಸಲಾಗಿದೆ. ಮುಖ್ಯವಾಗಿ ಕರ್ನಾಟಕದ ಹಂಪಿಯಲ್ಲಿ ಪ್ರಹ್ಲಾದ್ ಜೋಶಿ, ಪಟ್ಟದಕಲ್ಲಿನಲ್ಲಿ ರಾಜೀವ್ ಚಂದ್ರಶೇಖರ್, ಹಳೆಬೀಡಿನಲ್ಲಿ ಶೋಭಾ ಕರಂದ್ಲಾಜೆ, ಗೋಳಗುಮ್ಮಟದಲ್ಲಿ ಭಗವಂತ ಖೂಬಾ ಭಾಗವಹಿಸಲಿದ್ದಾರೆ.