ನವದೆಹಲಿ: ಈ ತಿಂಗಳಾಂತ್ಯಕ್ಕೆ ಕೊನೆಗೊಳ್ಳಬೇಕಿದ್ದ ಜನಗಣತಿ-೨೦೨೧ ರ ಮೊದಲ ಹಂತದ ಪ್ರಕ್ರಿಯೆಯನ್ನು ಕೊರೋನಾ ಕಾರಣಕ್ಕೆ ಮುಂದೂಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರ ಸರ್ಕಾರದ ಆದೇಶದಂತೆ ೨೦೨೦ ಏಪ್ರಿಲ್ ೧ ರಿಂದ ಸೆಪ್ಟೆಂಬರ್ ೩೦ ರವರೆಗೆ ಜನಗಣತಿ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಮಾರ್ಚ್ ನಲ್ಲಿ ದೇಶದಾದ್ಯಂತ ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಪ್ರಕ್ರಿಯೆ ಮುಂದೂಡಲಾಗಿತ್ತು.
ರಾಜ್ಯಸಭೆಗೆ ಈ ಬಗ್ಗೆ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಾಹಿತಿ ನೀಡಿದ್ದು, ಗಣತಿ,ಅಂಕಿ ಅಂಶಗಳ ಮಾಹಿತಿಗಾಗಿ ಸುರಕ್ಷತೆ ಹಾಗೂ ಭದ್ರತೆಗಾಗಿ ಬಹುಹಂತದ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
ಜನಗಣತಿಯ ಅಂಕಿಅಂಶಗಳನ್ನು ಸುರಕ್ಷಿತವಾಗಿ ಕಾದಿರಿಸಲು ಕ್ರಮಕೈಗೊಳ್ಳಲಾಗಿದ್ದು, ಇದಕ್ಕಾಗಿ ಮೊಬೈಲ್ ಆ್ಯಪ್ ಅಭಿವೃದ್ಧಿ, ಜನಗಣತಿ ಪೋರ್ಟಲ್ ನಿರ್ವಹಣೆಗಾಗಿ ಸಿಸ್ಟಮ್ ಇಂಟಿಗ್ರೇಟೆಡ್ ಸಂಸ್ಥೆಯ ನೆರವು ಪಡೆಯಲಾಗುತ್ತಿದೆ ಎಂದರು.
ಕೊರೋನಾ ಎಫೆಕ್ಟ್ ಜನಗಣತಿ ಮೊದಲ ಹಂತದ ಪ್ರಕ್ರಿಯೆ ಕೈಬಿಟ್ಟ ಕೇಂದ್ರ ಸರ್ಕಾರ
Follow Us