Sunday, December 5, 2021

ಬದಲಾಗುತ್ತಿದೆ ಕೊರೋನಾ ರೋಗ ಲಕ್ಷಣ!

Follow Us

ನವದೆಹಲಿ: ಕೊರೋನಾದ ರೋಗ ಲಕ್ಷಣ ಬದಲಾಗುತ್ತಿದೆ. ಕೊರೋನಾ ರೋಗದ ಮೂಲ ಎನಿಸಿರುವ ಚೀನಾದಲ್ಲೂ ಈಗ ಕೊರೋನಾ ಸಾಕಷ್ಟು ರೂಪಾಂತರಗೊಂಡಿದೆ ಎಂದು ತಿಳಿದುಬಂದಿದೆ. ಕೊರೋನಾ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಮಕ್ಕಳ ಕಾಲು ಬೆರಳುಗಳಲ್ಲಿ ಉರಿಯೂತ, ಕಾಲು ಬೆರಳುಗಳ ಬಣ್ಣ ಬದಲಾಗುವುದು ಕಂಡುಬರುತ್ತಿದೆ.
ಜ್ವರ, ಶೀತ, ಕೆಮ್ಮು ಅಲ್ಲದೆ ಇದರೊಂದಿಗೆ ಹೊಸ ರೋಗ ಲಕ್ಷಣದ ಮೂಲಕ ಕೋವಿಡ್ ಸೋಂಕಿತರನ್ನು ಪತ್ತೆ ಮಾಡಬಹುದಾಗಿದೆ ಎಂದು ಇಟಲಿ ಹಾಗೂ ಅಮೆರಿಕದಲ್ಲಿ ಚರ್ಚೆ ನಡೆಯುತ್ತಿದೆ.
ಇಟಲಿಯ ವೈದ್ಯರು ಈ ರೀತಿಯ ಉರಿಯೂತ, ಕಾಲು ಬೆರಳುಗಳ ಬಣ್ಣ ಬದಲಾಗುವುದಕ್ಕೆ ‘Covid Toes’ ಎಂದು ಅಡ್ಡ ಹೆಸರು ಇಟ್ಟಿದ್ದಾರೆ. ಮಕ್ಕಳಲ್ಲಿಯೇ ಈ ರೋಗ ಲಕ್ಷಣ ಕಂಡುಬರುತ್ತಿದೆ.
ಕೊರೊನಾ ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ತಗುಲಿತ್ತಿದೆ. ಕೆಲವರಿಗೆ ರೋಗ ಲಕ್ಷಣ ಇಲ್ಲದೆ ಇದ್ದರೂ, ಪಾಸಿಟಿವ್ ವರದಿ ಬಂದಿದೆ. ಹೀಗಾಗಿ ಸೋಂಕು ಪತ್ತೆ ಮಾಡುವುದೇ ಸವಾಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ರಾಜ್ಯದಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣ ಪತ್ತೆ, 330 ಜನ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,98,099ಕ್ಕೆ ಏರಿಕೆಯಾಗಿದೆ 330 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ...

ಸರಣಿ ಅಪಘಾತ: ಓರ್ವ ಸಾವು, ಇಬ್ಬರು ಗಂಭೀರ

newsics.com ಉಡುಪಿ: ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಕಾರು, ಬೈಕ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೀನು ಸಾಗಾಟದ ವಾಹನದ...

ಜೈಪುರದಲ್ಲೂ 9 ಒಮೈಕ್ರಾನ್ ಪ್ರಕರಣ ಪತ್ತೆ

newsics.com ಜೈಪುರ: ಮಹಾರಾಷ್ಟ್ರದ ಬಳಿಕ ಇದೀಗ ಜೈಪುರದಲ್ಲೂ 9 ಒಮೈಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ಒಂದೇ ಕುಟುಂಬದವರಲ್ಲಿ ಸೋಂಕು ಪತ್ತೆಯಾಗಿದ್ದು, ಇವರು ದಕ್ಷಿಣ ಆಫ್ರಿಕಾದಿಂದ ಬಂದವರು ಎಂದು ತಿಳಿದುಬಂದಿದೆ. ಮುಂಬೈನಲ್ಲಿ ಇಂದು ಒಂದೇ ದಿನ 7 ಜನರಿಗೆ...
- Advertisement -
error: Content is protected !!