Wednesday, October 5, 2022

ಅಕ್ಷರ ಮೋಡಿಗಾರ ಇನ್ನು ನೆನಪು ಮಾತ್ರ…

Follow Us

♦ ‘ಅಗ್ನಿಕಾವ್ಯ’ಕ್ಕೆ ರೂಪ ಕೊಟ್ಟ ರವಿ ಬೆಳಗೆರೆ ಅಗ್ನಿಲೀನ


newsics.com

ಬೆಂಗಳೂರು: ಅಕ್ಷರ ಮಾಂತ್ರಿಕ, ಸಾಹಿತಿ, ಹಿರಿಯ ಪತ್ರಕರ್ತ ರವಿ ಬೆಳಗೆರೆ ಇನ್ನು ನೆನಪು ಮಾತ್ರ.
ಗುರುವಾರ (ನ.12) ತಡರಾತ್ರಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ರವಿ ಬೆಳಗೆರೆ ಪಾರ್ಥಿವ ಶರೀರ ಶುಕ್ರವಾರ ಸಂಜೆ  ಪಂಚಭೂತಗಳಲ್ಲಿ ಲೀನವಾಯಿತು. ‘ಅಗ್ನಿಕಾವ್ಯ’ಕ್ಕೆ ರೂಪ ಕೊಟ್ಟ ರವಿ ಬೆಳಗೆರೆ ಅಗ್ನಿಯಲ್ಲಿ ಲೀನವಾದರು.
ಜಾತಿ ಮೀರಿದ್ದ ರವಿ ಬೆಳಗೆರೆ ಅವರ ಅಂತ್ಯಕ್ರಿಯೆ ಹಿಂದು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು. ಮಕ್ಕಳಾದ ಕರ್ಣ ಹಾಗೂ ಹಿಮವಂತ ಅಂತ್ಯಕ್ರಿಯೆಯ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಕೊನೆಯವರೆಗೂ ದುಡಿಯುತ್ತಲೇ ಇದ್ದ, ಅಕ್ಷರ ಸೇವೆ ಮಾಡುತ್ತಲೇ ಕೊನೆಯುಸಿರೆಳೆದ ರವಿ ಬೆಳಗೆರೆ ಬೆಂಗಳೂರಿನ ಪದ್ಮನಾಭ ನಗರದ ತಮ್ಮ ಕಚೇರಿಯಲ್ಲೇ ಗುರುವಾರ ತಡರಾತ್ರಿ ಹೃದಯಾಘಾತಕ್ಕೆ ಒಳಗಾಗಿ ಅಲ್ಲಿಯೇ ಅಸುನೀಗಿದರು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಅವರ ಉಸಿರು ನಿಂತಿತ್ತು. ಶುಕ್ರವಾರ ಸೂರ್ಯ ಉದಯಿಸುವ ಮುನ್ನವೇ ಅಸ್ತಂಗತರಾಗಿ ಸಾಹಿತ್ಯ- ಪತ್ರಿಕೋದ್ಯಮ ಕ್ಷೇತ್ರದಲ್ಲಿ ಶೂನ್ಯವನ್ನು ಸೃಷ್ಟಿಸಿಬಿಟ್ಟರು.
ಬಳಿಕ ಅವರ ಪಾರ್ಥಿವ ಶರೀರವನ್ನು ಅವರ ನಿವಾಸ ಕನಕಪುರ ರಸ್ತೆಯ ಕರಿಷ್ಮಾ ಹಿಲ್ಸ್’ಗೆ ಸ್ಥಳಾಂತರಿಸಲಾಯಿತು. ಶುಕ್ರವಾರ (ನ.13) ಬೆಳಗ್ಗೆ 10:30 ರಿಂದ ಮಧ್ಯಾಹ್ನ 3 ರವರೆಗೂ ಅವರೇ ಕಟ್ಟಿದ್ದ ಪ್ರಾರ್ಥನಾ ಶಾಲೆ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 4:30 ರ ಹೊತ್ತಿಗೆ ಬನಶಂಕರಿ ಚಿತಾಗಾರದಲ್ಲಿ ಅವರ ಚಿತೆಗೆ ಮಕ್ಕಳಾದ ಕರ್ಣ, ಹಿಮವಂತ ಅಗ್ನಿಸ್ಪರ್ಶ ಮಾಡಿದರು.
ಬದುಕಿದ್ದಷ್ಟೂ ದಿನ ಬ್ಯುಸಿಯಾಗಿಯೇ ಇರುತ್ತಿದ್ದ ರವಿ ಬೆಳಗೆರೆ ಕೊನೆಯ ಕ್ಷಣದವರೆಗೂ ಅವರು ಕೆಲಸ ಮಾಡುತ್ತಲೇ ಇದ್ದರು. ತಮ್ಮ ಕರ್ಮಭೂಮಿ ಎನಿಸಿದ್ದ ಕಚೇರಿಯಲ್ಲೇ ಕೊನೆಯುಸಿರೆಳೆದರು. ಈ ಕಾಯಕ ಯೋಗಿ ಅಕ್ಷರ ಮಾಂತ್ರಿಕ, ಹಲವು ಯುವ ಬರಹಗಾರರಿಗೆ ಸ್ಪೂರ್ತಿಯಾಗಿದ್ದರು.
ಬರವಣಿಗೆಯಲ್ಲಿಯೇ ಬದುಕು ಕಟ್ಟಿಕೊಂಡ ರವಿ ಬೆಳಗೆರೆ ಕೊನೆಯ ಕ್ಷಣದವರೆಗೂ ಬರೆಯುತ್ತಲೇ ಇದ್ದರು ಎನ್ನುವುದು ವಿಶೇಷ. ರವಿ ಬೆಳಗೆರೆಯವರು ಗುರುವಾರ ಮಧ್ಯರಾತ್ರಿವರೆಗೂ ಬರವಣಿಗೆಯಲ್ಲೇ ತೊಡಗಿಸಿಕೊಂಡಿದ್ದರು. ಗುರುವಾರ ‘ಹಾಯ್ ಬೆಂಗಳೂರು’ ಪತ್ರಿಕೆಯ ‘ಖಾಸ್ ಬಾತ್’ ಅಂಕಣಕ್ಕಾಗಿ ಅವರು ಬರೆದ ಕೊನೆಯ ಸಾಲುಗಳು ಇವು…’ಮನಸ್ಸನ್ನು 40 ದಾಟದಂತೆ ನೋಡಿಕೊಳ್ಳುವುದರಲ್ಲಿ ಸುಖವಿದೆ. ಬರವಣಿಗೆ ಎಂಥಾವರನ್ನೂ ಒಳ್ಳೆಯವರನ್ನಾಗಿ ಮಾಡುತ್ತದಾ? ಕನಸು ಏಕಾಂತದಲ್ಲಿ ಹುಟ್ಟಬೇಕು, ಜನಜಂಗುಳಿಯಲ್ಲಿ ಬೆಳೆಯಬೇಕು.’ ಎಂದು ಬರೆದಿದ್ದರು. ಇದೇ ಸಾಲುಗಳು ಅಕ್ಷರ ವಾರಸುದಾರನ ಬದುಕಿನ ಕೊನೆಯ ವಾಕ್ಯಗಳಾದದ್ದು ಮಾತ್ರ ವಿಪರ್ಯಾಸ.

ಖ್ಯಾತ ಪತ್ರಕರ್ತ, ಸಾಹಿತಿ ರವಿ ಬೆಳಗೆರೆ ಇನ್ನಿಲ್ಲ

ಅಕ್ಷರ ಬೆಳೆಗಾರ

ಮತ್ತಷ್ಟು ಸುದ್ದಿಗಳು

vertical

Latest News

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ...

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು. ದಿನೇಶ್ ಕಾರ್ತಿಕ್ 46 ರನ್​ ಹಾಗೂ...

ದೇಶದ ಶೇ.90ಕ್ಕಿಂತ ಹೆಚ್ಚು ಸ್ಟಾರ್ಟ್‌ಅಪ್‌ಗಳು ವಿಫಲ: ಬಿಲಿಯನೇರ್ ಆನಂದ್ ಮಹೀಂದ್ರ

newsics.com ನವದೆಹಲಿ: ದೇಶದ ಶೇ.90ರಷ್ಟು ಸ್ಟಾರ್ಟ್‌ಅಪ್‌ಗಳು ವಿಫಲವಾಗಿವೆ ಎಂದು ಬಿಲಿಯನೇರ್ ಆನಂದ್ ಮಹೀಂದ್ರ ಹೇಳಿದ್ದಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವೀಟ್ ಮಾಡಿ, ಎಲ್ಲಾ ಸ್ಟಾರ್ಟ್‌ಅಪ್‌ಗಳಲ್ಲಿ 90% ಕ್ಕಿಂತ ಹೆಚ್ಚು ವಿಫಲವಾಗಿವೆ. ಒಂದು-ಆಫ್ ಸನ್ನಿವೇಶಗಳಿಂದಾಗಿ...
- Advertisement -
error: Content is protected !!