newsics.com
ಚೆನೈ: ಕೋಟ್ಯಾಂತರ ಅಭಿಮಾನಿಗಳ ಹಾರೈಕೆ ಕೊನೆಗೂ ಫಲಿಸಿದ್ದು, ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಹೀಗಾಗಿ ಸದ್ಯದಲ್ಲೇ ಎಸ್‍ಪಿಬಿ ಆಸ್ಪತ್ರೆಯಿಂದ ಮನೆಗೆ ಮರಳಲಿದ್ದಾರೆ ಎಂದು ಗಾಯಕ ಎಸ್‍ಪಿಬಿ ಪುತ್ರ ಚರಣ್ ಮಾಹಿತಿ ನೀಡಿದ್ದಾರೆ.
ಅನಾರೋಗ್ಯಕ್ಕಿಡಾಗಿದ್ದ ಎಸ್‍ಪಿಬಿಯವರಿಗೆ ಕೊರೋನಾ ಸೋಂಕು ಕೂಡ ತಗುಲಿದ ಹಿನ್ನೆಲೆಯಲ್ಲಿ ಅವರನ್ನು ಚೆನೈನ ಎಂಜಿಎಂಗೆ ದಾಖಲಿಸಲಾಗಿತ್ತು. ಆದರೆ ಇತರ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಎಸ್‍ಪಿಬಿ ಆರೋಗ್ಯ ತೀವ್ರ ಹದಗೆಟ್ಟು ಅವರನ್ನು ವೆಂಟಿಲೇಟರ್ ಉಸಿರಾಟ ವ್ಯವಸ್ಥೆಗೆ ಒಳಪಡಿಸಲಾಗಿತ್ತು.
ಚಿಕಿತ್ಸೆ ಬಳಿಕ ಅವರ ಕೊರೋನಾ ರಿಪೋರ್ಟ ನೆಗೆಟಿವ್ ಬಂದಿದೆ. ಈ ಬಗ್ಗೆ ಪುತ್ರ ಚರಣ್ ಟ್ವೀಟ್ ಮಾಡಿದ್ದು, ತಂದೆಯ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ತಂದೆಯವರಿಗೆ ವೆಂಟಿಲೇಟರ್ ಅಳವಡಿಸಿಯೇ ಚಿಕಿತ್ಸೆ ಮುಂದುವರಿಸಲಾಗಿದೆ. ಪಿಸಿಯೋಥೆರಪಿ ಕೂಡ ಮಾಡಲಾಗುತ್ತಿದೆ. ಅವರು ದ್ರವಾಹಾರ ಸೇವಿಸುತ್ತಿದ್ದಾರೆ. ಸಧ್ಯದಲ್ಲೇ ಅವರು ಮನೆಗೆ ಮರಳಲಿದ್ದು, ಅದನ್ನು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ಊಟ ಬಂದಾಗ ಡಾನ್ಸ್ ಮಾಡುವ ನಾಯಿ…!
ಊಟ ಬಂದಾಗ ಡಾನ್ಸ್ ಮಾಡುವ ನಾಯಿ…!
ಭಾರೀ ಮಳೆ; ಬಾಂಬೆ ಕೋರ್ಟ್ ಬಂದ್
ರಾಜ್ಯಸಭೆಯಲ್ಲೂ ವಿದೇಶಿ ದೇಣಿಗೆ ಮಸೂದೆ ಅಂಗೀಕಾರ
ಚೀನಾಗೆ ಯುದ್ಧ ಬೇಕಿಲ್ಲ- ಕ್ಸಿ ಜಿನ್ ಪಿಂಗ್