Saturday, April 17, 2021

ಇತ್ತ ಮಾತುಕತೆ, ಅತ್ತ ಸೇನೆ ನಿಯೋಜನೆ; ಚೀನಾ ಮೋಸದಾಟ

ಲಡಾಖ್: ಮಾತುಕತೆ ನಡುವೆಯೇ ಚೀನಾ ಎಲ್ಎಸಿ ಉದ್ದಕ್ಕೂ ಮತ್ತೆ ಸೇನೆ ನಿಯೋಜನೆ, ನಿರ್ಮಾಣ ಕಾಮಗಾರಿ ಮುಂದುವರೆಸಿದೆ.
ಚೀನಾ ಫಿಂಗರ್ ಏರಿಯಾಗಳಲ್ಲಿ ಹೊಸ ಪ್ರದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಆಕ್ರಮಣಕಾರಿಯಾಗಿ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಮೂಲಕ ಗಲ್ವಾನ್ ಕಣಿವೆ ಘರ್ಷಣೆಯ ನಂತರವೂ ಚೀನಾ ಉದ್ಧಟತನ ಮುಂದುವರಿಸಿದೆ. ಮೇ 4 ರಿಂದ ಈಶಾನ್ಯ ಲಡಾಖ್ ನಲ್ಲಿ ಎಲ್ಎಸಿಯ ಉದ್ದಕ್ಕೂ 10,000 ಸೇನಾ ಸಿಬ್ಬಂದಿ ನಿಯೋಜನೆ, ಬೃಹತ್ ಶಸ್ತ್ರಾಸ್ತ್ರಗಳು, ಡಿಫೆನ್ಸ್ ಬ್ಯಾಟರಿಗಳನ್ನು ಸ್ಥಾಪಿಸಿದೆ.
ಪ್ಯಾಂಗಾಂಗ್ ತ್ಸೋ ನದಿಯ ಉದ್ದಕ್ಕೂ ಇರುವ ಫಿಂಗರ್ ಏರಿಯಾದ ಬಳಿ ಚೀನಾ ಸೇನಾ ಸಿಬ್ಬಂದಿ ನಿಯೋಜನೆ, ನಿರ್ಮಾಣ ಕಾಮಗಾರಿ ಸೇರಿದಂತೆ ತನ್ನ ಸೇನಾ ಚಟುವಟಿಕೆಗಳನ್ನು ಮುಂದುವರೆಸಿದೆ. ಭಾರತ ಫಿಂಗರ್ 8 ರವರೆಗೂ ತನ್ನ ಹಕ್ಕು ಪ್ರತಿಪಾದನೆ ಮಾಡುತ್ತಿದೆ. ಚೀನಾದೊಂದಿಗಿನ ಘರ್ಷಣೆ ಬಳಿಕ ಚೀನಾ ಸೇನೆ ಭಾರತೀಯ ಗಸ್ತು ಸಿಬ್ಬಂದಿಯನ್ನು ಫಿಂಗರ್ 4 ನ್ನು ದಾಟಿ ಹೋಗದಂತೆ ನಿರ್ಬಂಧ ವಿಧಿಸುತ್ತಿದೆ.

ಮತ್ತಷ್ಟು ಸುದ್ದಿಗಳು

Latest News

ಕುಂಭಮೇಳದ ಪ್ರಧಾನ ಸಾಧು ಕೊರೋನಾಗೆ ಬಲಿ

newsics.com ಹರಿದ್ವಾರ: ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಸಾಧು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 65 ವರ್ಷದ ಸಾಧು ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕುಂಭಮೇಳಕ್ಕೆ ಮಧ್ಯಪ್ರದೇಶದಿಂದ...

ಬೆಂಗಳೂರು ವಿವಿ ಪರೀಕ್ಷೆಗಳು‌ ಮುಂದೂಡಿಕೆ

newsics.com ಬೆಂಗಳೂರು: ಕೊರೋನಾ ಅಬ್ಬರ ಹಾಗೂ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಶೀಘ್ರದಲ್ಲೇ ಮುಂದಿನ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಏ.19, 20, 21ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ...

ಪಂಜಾಬ್ ವಿರುದ್ಧ ಚೆನ್ನೈಗೆ ಸುಲಭದ ಗೆಲುವು

newsics.com ಮುಂಬೈ: ಐಪಿಎಲ್ 2021ರ ಆವೃತ್ತಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲರ್ಗಳ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ಹೀನಾಯ ಸೋಲು ಅನುಭವಿಸಿತು. ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್ ಗೆಲುವು ಗಳಿಸಿದೆ. 106 ರನ್ಗಳ...
- Advertisement -
error: Content is protected !!