Monday, May 17, 2021

ಶೀಘ್ರದಲ್ಲೇ ಭಾರತದಲ್ಲಿ ಸಿಟಿ ಬ್ಯಾಂಕ್ ಕಾರ್ಯನಿರ್ವಹಣೆ ಸ್ಥಗಿತ

newsics.com
ನವದೆಹಲಿ: ಅಮೆರಿಕ‌ದ ಬ್ಯಾಂಕಿಂಗ್ ದೈತ್ಯ ಸಿಟಿ ಬ್ಯಾಂಕ್ ಶೀಘ್ರದಲ್ಲೇ ಭಾರತ ಸೇರಿ 13 ದೇಶಗಳಲ್ಲಿ ತನ್ನ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಲಿದೆ.
ಮೂರು ದಶಕಗಳಿಗಿಂತಲೂ ಹೆಚ್ಚು ಸಮಯದ ನಂತರ ಸಿಟಿಬ್ಯಾಂಕ್ ಭಾರತದಲ್ಲಿನ ತನ್ನ ಎಲ್ಲಾ ವಹಿವಾಟುಗಳ ವಿಭಾಗದಿಂದ ನಿರ್ಗಮಿಸಲಿದೆ. ಈ ಬ್ಯಾಂಕ್ ದೇಶದಲ್ಲಿ 35 ಶಾಖೆಗಳನ್ನು ಹೊಂದಿದೆ. ಗ್ರಾಹಕ ಬ್ಯಾಂಕಿಂಗ್ ವ್ಯವಹಾರದಲ್ಲಿ ಸುಮಾರು 4,000 ಉದ್ಯೋಗಿಗಳಿದ್ದಾರೆ. ನೇಮಿಸಿಕೊಂಡಿದೆ. ನಿರ್ಗಮನದ ಮೂಲ ಉದ್ದೇಶ ತಕ್ಷಣಕ್ಕೆ ತಿಳಿದುಬಂದಿಲ್ಲ.
ಗ್ರಾಹಕ ಬ್ಯಾಂಕಿಂಗ್ ವ್ಯವಹಾರದಿಂದ ಪ್ರಸ್ತಾಪಿತ ನಿರ್ಗಮನಕ್ಕೆ ನಿಯಂತ್ರಕ ಅನುಮೋದನೆ ಬೇಕಾಗುವುದರಿಂದ ಸದ್ಯಕ್ಕೆ ಯಾವುದೇ ಬದಲಾವಣೆ ಇರುವುದಿಲ್ಲ. ನಮ್ಮ ಕಾರ್ಯಾಚರಣೆಗಳಲ್ಲಿ ತಕ್ಷಣದ ಬದಲಾವಣೆಗಳಿಲ್ಲ. ನಮ್ಮ ಸಹೋದ್ಯೋಗಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈಗಲೂ ನಾವು ಅದೇ ಕಾಳಜಿ, ಅನುಭೂತಿ ಮತ್ತು ಸಮರ್ಪಣೆಯೊಂದಿಗೆ ನಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸುತ್ತೇವೆ ಎಂದು ಸಿಟಿ ಬ್ಯಾಂಕ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಶು ಖುಲ್ಲರ್ ಹೇಳಿದ್ದಾರೆ.
ಸಿಟಿಬ್ಯಾಂಕ್ 1902ರಲ್ಲಿ ಭಾರತ ಪ್ರವೇಶಿಸಿದ್ದರೂ 1985ರಲ್ಲಿ ಗ್ರಾಹಕ ಬ್ಯಾಂಕಿಂಗ್ ವ್ಯವಹಾರವನ್ನು ಪ್ರಾರಂಭಿಸಿತ್ತು. ಸಾಮಾಜಿಕ ದೃಷ್ಟಿಕೋನದಿಂದ ಗ್ರಾಹಕ ಬ್ಯಾಂಕ್ ಕೃಷಿ, ಕೈಗೆಟುಕುವ ವಸತಿ, ನವೀಕರಿಸಬಹುದಾದ ಇಂಧನ ಮತ್ತು ಎಂಎಸ್‌ಎಂಇಗಳಿಗೆ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) 2020ರ ಮಾರ್ಚ್ ವೇಳೆಗೆ 27,911 ಕೋಟಿ ರೂ. ಸಾಲ ನೀಡಿದೆ.

ಮತ್ತಷ್ಟು ಸುದ್ದಿಗಳು

Latest News

ಮರದ ಮೇಲೆಯೇ 11 ದಿನ‌ ಐಸೋಲೇಟ್ ಆದ ಕೊರೋನಾ ಸೋಂಕಿತ ವಿದ್ಯಾರ್ಥಿ!

newsics.com ಹೈದರಾಬಾದ್: ಕೊರೋನಾ ಸೋಂಕಿತರು ಹೋಂ‌ ಐಸೋಲೇಷನ್ ಗೆ ಒಳಗಾಗಲು ಹಲವು‌ ಕುಟುಂಬಗಳು ಮನೆಯಲ್ಲಿ ಜಾಗದ ಅಭಾವವನ್ನೂ ಎದುರಿಸುತ್ತಿವೆ. ತೆಲಂಗಾಣದ ನಲಗೊಂಡ ಜಿಲ್ಲೆಯ ಹಲವು ಕುಟುಂಬಗಳು ಅಡುಗೆ ಕೋಣೆ...

ಏನಿದು ಲಸಿಕೆ ಪಾಸ್‌ಪೋರ್ಟ್‌?

newsics.com ನವದೆಹಲಿ: ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕೋವಿಡ್ ವಿರುದ್ಧದ ಲಸಿಕೆ ಅಭಿಯಾನ ನಡೆಯುತ್ತಿರುವ ವೇಳೆಯಲ್ಲೇ 'ಲಸಿಕೆ ಪಾಸ್‌ಪೋರ್ಟ್‌' ಸದ್ದು ಮಾಡುತ್ತಿದೆ. ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಪದ. ಹೆಚ್ಚು ಜನರು ಲಸಿಕೆ...

ಫೇಸ್’ಬುಕ್’ನಲ್ಲಿ ಉಗ್ರ ಸಿದ್ಧಾಂತದ ಫೋಸ್ಟ್: ತಮಿಳುನಾಡಿನ 4 ಕಡೆ ಎನ್ಐಎ ಶೋಧ

newsics.com ಚೆನ್ನೈ: ಉಗ್ರ ಸಂಘಟನೆಗಳ ಸಿದ್ಧಾಂತ ಪ್ರತಪಾದಿಸುವ ಪೋಸ್ಟ್'ಗಳನ್ನು ಫೇಸ್'ಬುಕ್'ನಲ್ಲಿ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಭಾನುವಾರ ತಮಿಳುನಾಡಿನ ಮಧುರೈ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ ಶೋಧ ನಡೆಸಿದೆ. ಮಧುರೈ ಜಿಲ್ಲೆಯ ಕಾಜಿಮಾರ್...
- Advertisement -
error: Content is protected !!