ಬೆಂಗಳೂರು: ಕೊರೋನಾ ಮಹಾಮಾರಿಯಿಂದ ಚಿತ್ರರಂಗ ತತ್ತರಿಸಿದೆ. ಹೀಗಾಗಿ ಸ್ಯಾಂಡಲವುಡ್ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಿಎಂ ಜತೆ ಚರ್ಚಿಸಲು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಮಂಗಳವಾರ (ಆ.4) ಸಿಎಂ ಭೇಟಿ ಮಾಡಲಿದ್ದಾರೆ.
ಶಿವಣ್ಣ ನೇತೃತ್ವದಲ್ಲಿ ಚಿತ್ರರಂಗದ ಹಲವು ಕಲಾವಿದರು, ನಿರ್ದೇಶಕರು,ನಿರ್ಮಾಪಕರು ಸಿಎಂ ಭೇಟಿ ಮಾಡಲಿದ್ದು, ಚಿತ್ರರಂಗದ ಸಂಕಷ್ಟ, ಕಲಾವಿದರ ಸಮಸ್ಯೆ ಸೇರಿದಂತೆ ಹಲವು ವಿಚಾರಗಳನ್ನು ಸಿಎಂ ಯಡಿಯೂರಪ್ಪ ಗಮನಕ್ಕೆ ತಂದು ಚಿತ್ರರಂಗಕ್ಕಾಗಿ ವಿಶೇಷ ಪ್ಯಾಕೇಜ್ ನೀಡಲು ಮನವಿ ಮಾಡಲಿದ್ದಾರೆ ಎನ್ನಲಾಗಿದೆ.
ಇತ್ತೀಚಿಗಷ್ಟೇ ಚಿತ್ರರಂಗ ನಟ ಶಿವರಾಜ್ ಕುಮಾರ್ ಮನೆಯಲ್ಲಿ ಸಭೆ ನಡೆಸಿ, ಸಿಎಂ ಭೇಟಿಯ ನಿರ್ಣಯ ಕೈಗೊಂಡಿತ್ತು. ಅಲ್ಲದೇ ಈ ನಿಯೋಗದ ನೇತೃತ್ವವನ್ನು ಶಿವಣ್ಣ ವಹಿಸಿಕೊಂಡಿದ್ದರು.
ಶಿವಣ್ಣ ನಿವಾಸದಲ್ಲಿ ಸುದೀಪ್,ದರ್ಶನ ಹೊರತುಪಡಿಸಿದಂತೆ ಬಹುತೇಕ ನಾಯಕ ನಟರು,ಕಲಾವಿದರು,ನಿರ್ದೇಶಕರು ,ತಂತ್ರಜ್ಞರು ಸೇರಿದಂತೆ ಎಲ್ಲರೂ ಪಾಲ್ಗೊಂಡಿದ್ದರು. ಅಲ್ಲದೇ ಸಚಿವ ಸಿ.ಟಿ.ರವಿ ಕೂಡ ಶಿವಣ್ಣ ನಿವಾಸಕ್ಕೆ ತೆರಳಿ ಕಲಾವಿದರ ಕಷ್ಟ ಆಲಿಸಿದ್ದರು.
ಇದೀಗ ಮಂಗಳವಾರ ಸಿಎಂ ಭೇಟಿಗೆ ಸಮಯ ನಿಗದಿಯಾಗಿದೆ. ಈ ಭೇಟಿ ವೇಳೆ ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಘೋಷಿಸಿದ್ದ ಫಿಲ್ಮಂ ಸಿಟಿ ನಿರ್ಮಾಣದ ವಿಚಾರವನ್ನು ಚಿತ್ರರಂಗದ ನಿಯೋಗ ಸಿಎಂ ಬಳಿ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಆ.4ರಂದು ಸಿಎಂ ಬಿಎಸ್’ವೈ- ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಭೇಟಿ
Follow Us