Saturday, April 17, 2021

ಜುಲೈ’ನಲ್ಲಿ ಎಲ್ಲ ಭಾನುವಾರ ಕಂಪ್ಲೀಟ್ ಲಾಕ್’ಡೌನ್, ಶನಿವಾರವೂ ಬಂದ್ ಸಾಧ್ಯತೆ

ಬೆಂಗಳೂರು: ಜುಲೈ ತಿಂಗಳಿನ ಎಲ್ಲ ಭಾನುವಾರಗಳಂದು ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಮಾಡಲು ಸರ್ಕಾರ ನಿರ್ಧರಿಸಿದೆ.
ಅಲ್ಲದೆ, ಎಲ್ಲ ಶನಿವಾರವೂ ಕಂಪ್ಲೀಟ್ ಲಾಕ್ ಡೌನ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಕೊರೋನಾ ಸೋಂಕು ವಿಪರೀತವಾಗಿ ಹರಡುತ್ತಿರುವುದನ್ನು ಮನಗಂಡಿರುವ ಸರ್ಕಾರ ಸೋಂಕು ಹರಡುವಿಕೆ ತಡೆಯಲು ಪರಿಣಾಮಕಾರಿ ಕ್ರಮವಾಗಿ ವೀಕೆಂಡ್ ನಲ್ಲಿ ಸಂಪೂರ್ಣ ಲಾಕ್ ಡೌನ್, ರಾತ್ರಿ ವೇಳೆ ನಿಷೇಧಾಜ್ಞೆ ಸೇರಿದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಜುಲೈ 5, 12, 19, 26 ರ ಭಾನುವಾರಗಳಂದು ಸಂಪೂರ್ಣ ಲಾಕ್ ಡೌನ್ ಮಾಡಲಿದೆ. ಈ ವೇಳೆ ತುರ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲವೂ ಬಂದ್ ಆಗಿರಲಿವೆ ಎಂದು ಭಾನುವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಕೋವಿಡ್ 19 ತಜ್ಞರ ಸಮಿತಿ ಜತೆ ಸುದೀರ್ಘ ಸಭೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬಂದಿರುವ ಸರ್ಕಾರ, ತಜ್ಞರ ಸಮಿತಿ ಶಿಫಾರಸಿನಂತೆ ಶನಿವಾರಗಳಂದೂ (4, 11, 18, 25) ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕೊರೋನಾ ಹರಡುವಿಕೆಯನ್ನು ಈಗಲೇ ಪರಿಣಾಮಕಾರಿಯಾಗಿ ತಡೆಯದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ತಜ್ಞರ ಸಮಿತಿ ಎಚ್ಚರಿಕೆ ನೀಡಿರುವುದರಿಂದ ಸರ್ಕಾರ ಗಂಭೀರ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಅಲ್ಲದೆ, ಕೋವಿಡ್ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ, ಖಾಸಗಿ ಆಸ್ಪತ್ರೆಗಳಲ್ಲೂ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡಲು ಸರ್ಕಾರ ಮುಂದಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಸೇರಿ ಎರಡು ಕೋವಿಡ್ ಟೆಸ್ಟ್ ಸೆಂಟರ್ ಸೇರಿ ರಾಜ್ಯದ ಹಲವೆಡೆ ದುರಸ್ತಿಯಲ್ಲಿರುವ ಟೆಸ್ಟ್ ಲ್ಯಾಬ್ ಗಳು ತಕ್ಷಣ ಕಾರ್ಯನಿರ್ವಹಿಸುವಂತೆ ಮಾಡುವಂತೆ ಸಿಎಂ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. ಈ ಮಧ್ಯೆ, ಸೋಮವಾರ (ಜೂನ್ 29) ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸಾ ದರ ನಿಗದಿಗೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಚಿವರಾದ ಅಶೋಕ್ ಹಾಗೂ ಸುಧಾಕರ್ ನಡುವಿನ ಮುಸುಕಿನ ಗುದ್ದಾಟ ಬೀದಿಗೆ ಬಂದ ಹಿನ್ನೆಲೆಯಲ್ಲಿ ಸಿಎಂ ಅವರೇ ಖಾಸಗಿ ಆಸ್ಪತ್ರೆಗಳ ಸಭೆ ನಡೆಸಲಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಕುಂಭಮೇಳದ ಪ್ರಧಾನ ಸಾಧು ಕೊರೋನಾಗೆ ಬಲಿ

newsics.com ಹರಿದ್ವಾರ: ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಸಾಧು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 65 ವರ್ಷದ ಸಾಧು ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕುಂಭಮೇಳಕ್ಕೆ ಮಧ್ಯಪ್ರದೇಶದಿಂದ...

ಬೆಂಗಳೂರು ವಿವಿ ಪರೀಕ್ಷೆಗಳು‌ ಮುಂದೂಡಿಕೆ

newsics.com ಬೆಂಗಳೂರು: ಕೊರೋನಾ ಅಬ್ಬರ ಹಾಗೂ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಶೀಘ್ರದಲ್ಲೇ ಮುಂದಿನ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಏ.19, 20, 21ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ...

ಪಂಜಾಬ್ ವಿರುದ್ಧ ಚೆನ್ನೈಗೆ ಸುಲಭದ ಗೆಲುವು

newsics.com ಮುಂಬೈ: ಐಪಿಎಲ್ 2021ರ ಆವೃತ್ತಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲರ್ಗಳ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ಹೀನಾಯ ಸೋಲು ಅನುಭವಿಸಿತು. ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್ ಗೆಲುವು ಗಳಿಸಿದೆ. 106 ರನ್ಗಳ...
- Advertisement -
error: Content is protected !!