ನವದೆಹಲಿ: ಪತಂಜಲಿ ಸಂಸ್ಥೆಯ ಕೊರೊನಿಲ್ ಕಿಟ್ ಮಾರಾಟಕ್ಕೆ ಕೇಂದ್ರ ಆಯುಷ್ ಇಲಾಖೆ ಷರತ್ತುಬದ್ಧ ಅನುಮತಿ ನೀಡಿದೆ.
ಕೊರೊನಿಲ್’ನಿಂದ ಕೊರೋನಾ ಸೋಂಕು ನಿವಾರಣೆಯಾಗುತ್ತದೆ ಎಂದು ಪ್ರಚಾರ ಮಾಡಬಾರದು. ಮಾರಾಟ ಮಾಡಬಾರದು. ಬದಲಿಗೆಕೊರೊನಿಲ್ ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಇಮ್ಯೂನಿಟಿ ಬೂಸ್ಟರ್ ಎಂದಷ್ಟೇ ಹೇಳಿ ಮಾರಾಟ ಮಾಡುವಂತೆ ಆಯುಷ್ ಇಲಾಖೆ ತಾಕೀತು ಮಾಡಿದೆ.
ಆಯುಷ್ ಇಲಾಖೆ ಅನುಮತಿ ಹಿನ್ನೆಲೆಯಲ್ಲಿ ಇಂದಿನಿಂದಲೇ ಮಾರುಕಟ್ಟೆಯಲ್ಲಿ ಕೊರೊನಿಲ್ ಸಿಗಲಿದೆ ಎಂದು ಪತಂಜಲಿ ಸಂಸ್ಥೆ ಹೇಳಿದೆ.
ಕೊರೊನಿಲ್ ಕಿಟ್ ಸಾಕಷ್ಟು ವಿವಾದವನ್ನೇ ಸೃಷ್ಟಿಸಿತ್ತು. ಅನುಮತಿ ಪಡೆಯದೇ ಔಷಧ ಬಿಡುಗಡೆ ಮಾಡಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ಆಯುಷ್ ಇಲಾಖೆ ದೂರಿನ ಹಿನ್ನೆಲೆಯಲ್ಲಿ ಯೋಗ ಗುರು ಬಾಬಾ ರಾಮ್ ದೇವ್, ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.