ಪಟ್ನಾ: ಶ್ರೀರಾಮ ಮಂದಿರ ನಿರ್ಮಾಣಕ್ಕೆ 10 ಕೋಟಿ ರೂ. ದೇಣಿಗೆ ನೀಡುವುದಾಗಿ ಪಟ್ನಾದ ಮಹಾವೀರ ದೇವಾಲಯ ಟ್ರಸ್ಟ್ ಘೋಷಿಸಿದೆ.
ಅಯೋಧ್ಯೆಗೆ ತೆರಳಿ ಮೊದಲು 2 ಕೋಟಿ ರೂ. ಮೌಲ್ಯದ ಚೆಕ್ ನೀಡಲಿದ್ದು, ಬಳಿಕ ಹಂತ ಹಂತವಾಗಿ ಒಟ್ಟಾರೆ 10 ಕೋಟಿ ರೂ.ಗಳನ್ನು ಮಂದಿರ ನಿರ್ಮಾಣಕ್ಕೆ ನೀಡುವುದಾಗಿ ಮಹಾವೀರ ದೇವಾಲಯ ಟ್ರಸ್ಟ್ ನ ಕಾರ್ಯದರ್ಶಿ ಕಿಶೋರ್ ಕುನಾಲ್ ತಿಳಿಸಿದ್ದಾರೆ.
ಟ್ರಸ್ಟ್‌ಗೆ 1818ರ ಅವಧಿಯ 30 ನಾಣ್ಯಗಳು ದೊರೆತಿದ್ದು, ಈಸ್ಟ್ ಇಂಡಿಯಾ ಕಂಪನಿಯು ಈ ನಾಣ್ಯಗಳನ್ನು ಹೊರತಂದಿದೆ ಅವುಗಳ ಒಂದು ಬದಿಯಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾ ಮಾತೆ ಮತ್ತು ಆಂಜನೇಯ ಸ್ವಾಮಿಯ ಚಿತ್ರಗಳಿವೆ ಎಂದು ಕಿಶೋರ್ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣ; 10 ಕೋಟಿ ರೂ. ದೇಣಿಗೆ ಘೋಷಣೆ
Follow Us