ನವದೆಹಲಿ: ದೇಶದಲ್ಲಿ ಹೊಸದಾಗಿ 10,667 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,43,091ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 380 ಜನರು ಕೊರೋನಾಗೆ ಬಲಿಯಾಗಿದ್ದು, ಈವರೆಗೆ ದೇಶದಲ್ಲಿ 9,900 ಜನರು ಮೃತಪಟ್ಟಿದ್ದಾರೆ.
3.4 ಲಕ್ಷ ಪ್ರಕರಣಗಳ ಪೈಕಿ 1,80,013 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 1,53,178 ರೋಗಿಗಳು ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮಿಳುನಾಡಿನಲ್ಲಿ 1843 ಕೇಸ್, ಮಹಾರಾಷ್ಟ್ರದಲ್ಲಿ 2786 ಪ್ರಕರಣ (ಮುಂಬೈನಲ್ಲಿ 1066), ದೆಹಲಿಯಲ್ಲಿ 1647 ಕೇಸ್, ತೆಲಂಗಾಣದಲ್ಲಿ 219 ಕೇಸ್, ಮಧ್ಯಪ್ರದೇಶದಲ್ಲಿ 133 ಕೇಸ್, ರಾಜಸ್ಥಾನದಲ್ಲಿ 287 ಕೇಸ್, ಪಶ್ಚಿಮ ಬಂಗಾಳದಲ್ಲಿ 407 ಕೇಸ್, ಗೋವಾದಲ್ಲಿ 28 ಪ್ರಕರಣಗಳು ವರದಿಯಾಗಿವೆ.
ಹೆಚ್ಚು ಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಅಮೆರಿಕ, ಬ್ರೆಜಿಲ್, ರಷ್ಯಾ ಬಳಿಕ ಭಾರತದಲ್ಲಿ ಹೆಚ್ಚು ಕೇಸ್ಗಳು ಸಕ್ರಿಯವಾಗಿವೆ.