Monday, March 1, 2021

ಕೊರೋನಾ ಆತಂಕ; ಕಲಿತದ್ದನ್ನೇ ಮರೆಯುತ್ತಿರುವ ಮಕ್ಕಳು!

newsics.com
ಬೆಂಗಳೂರು: ಕೊರೋನಾದಿಂದಾಗಿ ಮಕ್ಕಳು ಖಿನ್ನತೆಗೆ ಒಳಗಾಗುತ್ತಿದ್ದು, ಕಲಿಕೆಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಇದರ ಪ್ರಭಾವ ಎಷ್ಟರಮಟ್ಟಿಗೆ ಆಗಿದೆಯೆಂದರೆ ಮಕ್ಕಳು ಕಲಿತದ್ದನ್ನೂ ಮರೆಯುತ್ತಿದ್ದಾರೆ. ನಾಲ್ಕನೇ ತರಗತಿಯ ಶೇ.11ರಷ್ಟು ವಿದ್ಯಾರ್ಥಿಗಳು ಗಡಿಯಾರದಲ್ಲಿ ಸಮಯ ನೋಡುವುದನ್ನೇ ಮರೆತಿದ್ದಾರೆ!
4ನೇ ತರಗತಿಯ ಶೇ.70ರಷ್ಟು ಮಕ್ಕಳು ದೊಡ್ಡ ಸಂಖ್ಯೆ, ಸಣ್ಣ ಸಂಖ್ಯೆಯಂಥ ಚಿಕ್ಕಪುಟ್ಟ ಅಂಶಗಳನ್ನು ಸಹ ಮರೆತಿದ್ದಾರೆ. 6ನೇ ತರಗತಿಯ ಮಕ್ಕಳು ಕೋನ ಗುರುತಿಸುವುದನ್ನು, ನಾಲ್ಕು ಸಂಖ್ಯೆಯ ಭಾಗಾಕಾರವನ್ನು ಮರೆತಿದ್ದಾರೆ.
ಅಜೀಂ ಪ್ರೇಮ್ ಜಿ ಫೌಂಡೇಷನ್ ನಡೆಸಿದ್ದ ಅಧ್ಯಯನದಲ್ಲಿ ಇಂತಹ ಹಲವು ಆಘಾತಕಾರಿ ಅಂಶಗಳು ಬಹಿರಂಗವಾಗಿವೆ. ಮಕ್ಕಳ ಸಾಮಾನ್ಯ ಗಣಿತದ ಜ್ಞಾನದಲ್ಲೂ ಕುಸಿತ ಕಂಡುಬಂದಿದೆ.
‘ಕೊರೋನಾ ಸೋಂಕಿನ ಸಾಂಕ್ರಾಮಿಕದ ಸಮಯದಲ್ಲಿ ಕಲಿಕೆಯ ನ್ಯೂನತೆ’ ಕುರಿತ ವರದಿಯನ್ನು ಅಜೀಂ ಪ್ರೇಮ್ ಜಿ ಫೌಂಡೇಷನ್ ಬಿಡುಗಡೆ ಮಾಡಿದೆ. 2021ರ ಜನವರಿಯಲ್ಲಿ ಈ ಅಧ್ಯಯನ ನಡೆಸಲಾಗಿದ್ದು, ಕರ್ನಾಟಕ, ಛತ್ತೀಸ್’ಗಢ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ್ ರಾಜ್ಯಗಳ 1137 ಶಾಲೆಗಳ 16 ಸಾವಿರ ವಿದ್ಯಾರ್ಥಿಗಳನ್ನು ಒಳಗೊಂಡಿರುವ ಈ ಅಧ್ಯಯನ, ಬಹಳಷ್ಟು ಅಚ್ಚರಿಯ ಅಂಶಗಳನ್ನು ಬಹಿರಂಗಮಾಡಿದೆ.
ಅಧ್ಯಯನದ ಪ್ರಕಾರ, ಕೆಲವು ಪ್ರದೇಶಗಳಲ್ಲಿ ಸ್ಮಾರ್ಟ್ ಫೋನ್ ಮತ್ತಿತರ ಅಗತ್ಯ ಸಲಕರಣೆಗಳಿಲ್ಲದೆ ಶೇ.27ರಿಂದ ಶೇ.80ರಷ್ಟು ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸುಗಳಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ.
2ರಿಂದ 6ನೇ ತರಗತಿಯ ವಿದ್ಯಾರ್ಥಿಗಳು ಸಂಖ್ಯೆಗಳನ್ನು ಗುರುತಿಸುವುದನ್ನು, ಸಾಮಾನ್ಯ ಕೂಡಿಸು-ಕಳೆಯುವ ಲೆಕ್ಕಗಳನ್ನು ಸಹ ಮರೆತುಬಿಟ್ಟಿದ್ದಾರೆ. 4ನೇ ತರಗತಿಯ ಶೇ.70ರಷ್ಟು ಮಕ್ಕಳು ದೊಡ್ಡ ಸಂಖ್ಯೆ, ಸಣ್ಣ ಸಂಖ್ಯೆಯಂಥ ಚಿಕ್ಕಪುಟ್ಟ ಅಂಶಗಳನ್ನು ಸಹ ಮರೆತಿದ್ದಾರೆ. 6ನೇ ತರಗತಿಯ ಮಕ್ಕಳು ಕೋನ ಗುರುತಿಸುವುದನ್ನು, ನಾಲ್ಕು ಸಂಖ್ಯೆಯ ಭಾಗಾಕಾರವನ್ನು ಮರೆತಿದ್ದಾರೆ.
2019ನೇ ಸಾಲಿನ ವರದಿಗೂ 2021ನೇ ಸಾಲಿನ ವರದಿಗೂ ಅಗಾಧ ವ್ಯತ್ಯಾಸ ಗುರುತಿಸಲಾಗಿದೆ. ಕೊರೋನಾದಿಂದಾಗಿ ಮಕ್ಕಳಲ್ಲಿ ಗಣಿತ ಸೇರಿದಂತೆ ಕಲಿಕಾ ಸಮಸ್ಯೆ ಹೆಚ್ಚಾಗಿರುವುದು ಬಹಿರಂಗವಾಗಿದೆ.

ಕೊರೋನಾ: ಮಕ್ಕಳು ಖಿನ್ನತೆಯತ್ತ ಜಾರುತ್ತಿರುವರೇ?

ಒಂದೇ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ

ಮತ್ತಷ್ಟು ಸುದ್ದಿಗಳು

Latest News

ಕಾಡಾನೆ ಜತೆ ಸೆಲ್ಪಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

newsics.com ರಾಂಚಿ:  ಛತ್ತೀಸ್ ಗಢದಲ್ಲಿ ಕಾಡಾನೆ ಜತೆ ಸೆಲ್ಪಿ ತೆಗೆಯಲು ಯತ್ನಿಸಿದ ಯವಕ ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು  ಮನೋಹರ್ ಪಟೇಲ್ ಎಂದು ಗುರುತಿಸಲಾಗಿದೆ. ರಾಯಗಢ...

ಅಸ್ಸಾಂನಲ್ಲಿ ಅಪಘಾತ: ಮೈಸೂರಿನ ಯೋಧ ಸಾವು

newsics.com ಗುವಾಹಟಿ:  ಅಸ್ಸಾಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೈಸೂರು ಮೂಲದ ಯೋಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.  ಮೃತಪಟ್ಟ ಯೋಧನನ್ನು ತಿ. ನರಸಿಪುರ ತಾಲೂಕಿನ  ಬೆಟ್ಟಹಳ್ಳಿ ಗ್ರಾಮದ ಮೋಹನ್ ಎಂದು ಗುರುತಿಸಲಾಗಿದೆ. ಕಳೆದ 10 ವರ್ಷದಿಂದ ಅವರು...

ತಿರುಪತಿ ಪ್ರವೇಶಿಸದಂತೆ ಚಂದ್ರಬಾಬು ನಾಯ್ಡುಗೆ ನಿರ್ಬಂಧ

newsics.com ತಿರುಪತಿ: ತೆಲುಗು ದೇಶಂ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಜು ಗೆ ತಿರುಪತಿ ಪ್ರವೇಶಿಸದಂತೆ ಪೊಲೀಸರು ತಡೆ ಒಡ್ಡಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಣಿಗುಂಟ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು...
- Advertisement -
error: Content is protected !!