newsics.com
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮತ್ತೆ ವರ್ಕ್ ಫ್ರಂ ಹೋಂ ಅಳವಡಿಕೆಗೆ ಐಟಿ ಕಂಪನಿಗಳು ನಿರ್ಧರಿಸಿವೆ.
ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಶೇ.70ರಷ್ಟು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.
ಶೇ.30ರಷ್ಟು ಸಿಬ್ಬಂದಿ ಮಾತ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು Signdesk.com ಸಂಸ್ಥೆ ತಿಳಿಸಿದೆ.
ಬೆಂಗಳೂರಿನಲ್ಲಿ ನಾವು ಮೂರು ಕಚೇರಿಗಳನ್ನು ಹೊಂದಿದ್ದೇವೆ. ನಾವು ಎಲ್ಲಾ ಮಹಾನಗರಗಳಲ್ಲಿಯೂ ಸಂಸ್ಥೆಯ ಕಚೇರಿಗಳನ್ನು ಹೊಂದಿದ್ದೇವೆ. ನೀವು ಒಟ್ಟಾರೆ ಉದ್ಯೋಗಿಗಳನ್ನು ನೋಡಿದರೆ, ನಾವು 30-40 ಪ್ರತಿಶತದಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದು Signdesk.com ಸಿಇಒ ಅಭಿಷೇಕ್ ಸಸೀದ್ರನ್ ಹೇಳಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ದೊಡ್ಡ ಐಟಿ ಸಂಸ್ಥೆಗಳಾದ ಟಿಸಿಎಸ್ ಮತ್ತು ಟೆಕ್ ಮಹೀಂದ್ರಾ ತಮ್ಮ ಉದ್ಯೋಗಿಗಳು ಕಚೇರಿಗೆ ಆಗಮಿಸುವಂತೆ ಆಹ್ವಾನ ನೀಡಿದ್ದವು. ಈ ವೇಳೆ ಕೆಲವರು ‘ವರ್ಕ್ ಫ್ರಮ್ ಹೋಮ್’ ಬಗ್ಗೆ ಉಲ್ಲೇಖಿಸಿದರೆ, ಇನ್ನು ಕೆಲವರು ಮಾನವ ಸಂವಹನದ ಕೊರತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ನೀವು ಸಹೋದ್ಯೋಗಿಗಳೊಂದಿಗೆ ಸಂವಹನ ನಡೆಸುವುದಿಲ್ಲ. ಎಲ್ಲಾ ಕರೆಗಳು ಮತ್ತು ಸಭೆಗಳು ಆನ್ಲೈನ್ನಲ್ಲಿ ನಡೆಯುತ್ತವೆ. ಯಾವುದೇ ಮಾನವ ಸಂವಹನ ಇರುವುದಿಲ್ಲ. ನೀವು ಜನರನ್ನು ಭೇಟಿ ಮಾಡಿದಾಗ ಮಾತ್ರವೇ ಹೊಸ ಆಲೋಚನೆಗಳು ಸಿಗುತ್ತವೆ. ಆದರೆ ವರ್ಕ್ ಫ್ರಮ್ ಹೋಮ್ನಿಂದಾಗಿ ಇದು ಕಷ್ಟಸಾಧ್ಯವಾಗುತ್ತಿದೆ ಎಂದು Signdesk.com ಹಣಕಾಸು ವಿಭಾಗದ ಮುಖ್ಯಸ್ಥ ದಿಲೀಪ್ ಅಡಿಗ ಹೇಳಿದ್ದಾರೆ.
ಬೆಂಗಳೂರು ಮೂಲದ ಸೈಬರ್ ಸೆಕ್ಯುರಿಟಿ ಸ್ಟಾರ್ಟಪ್ ಆಗಿರುವ ಬಾಟ್ಮ್ಯಾನ್ ತನ್ನ ಕಚೇರಿಯಲ್ಲಿ ಕೇವಲ ನಾಲ್ವರು ಉದ್ಯೋಗಿಗಳನ್ನು ಹೊಂದಿದೆ. ಈ ಹೈಬ್ರಿಡ್ ಮಾದರಿಯಿಂದ ಸಂಸ್ಥೆಯ ಕಾರ್ಯಾಚರಣೆಗೆ ಹಿನ್ನಡೆ ಆಗಲಿದೆ ಎಂದು ಸಂಸ್ಥೆಯ ಸಹ ಸಂಸ್ಥಾಪಕ ರಾಜಾ ಟಿಎನ್ ಹೇಳಿದ್ದಾರೆ.
ನೇತಾಜಿ ಸುಭಾಷ್ 125ನೇ ಜನ್ಮದಿನ: ಅರ್ಥಫೂರ್ಣ ಆಚರಣೆಗೆ ಸರ್ಕಾರ ನಿರ್ಧಾರ