ನವದೆಹಲಿ: ದೇಶದಲ್ಲಿ ಅಕ್ಷರಶ: ಕೊರೋನಾ ಮಹಾ ಸ್ಫೋಟ ಸಂಭವಿಸಿದೆ. ಕೊರೋನಾ ಸೋಂಕಿತರ ಸಂಖ್ಯೆ ಹತ್ತು ಲಕ್ಷ ದಾಟಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 34, 956 ಕೊರೋನಾ ಪ್ರಕರಣ ವರದಿಯಾಗಿದೆ. ಇದೀಗ ದೇಶದಲ್ಲಿನ ಸೋಂಕಿತರ ಸಂಖ್ಯೆ 10,03, 832ಕ್ಕೆ ತಲುಪಿದೆ.
ದೇಶದ ವಿವಿಧ ಆಸ್ಪತ್ರೆಗಳಲ್ಲಿ 3, 42, 473 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಕೊರೋನಾ 687 ಮಂದಿಯ ಬಲಿ ಪಡೆದುಕೊಂಡಿದೆ. ಕೊರೋನಾದಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 25, 602ಕ್ಕೆ ಏರಿದೆ.
ದಕ್ಷಿಣ ಭಾರತ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಪ್ರಕರಣ ವರದಿಯಾಗುತ್ತಿದೆ. ಇದರಿಂದಾಗಿ ಒಟ್ಟು ಕೊರೋನಾ ಪ್ರಕರಣ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಜನವರಿ 30ರಂದು ದೇಶದ ಮೊದಲ ಕೊರೋನಾ ಪ್ರಕರಣ ಕೇರಳದ ತ್ರಿಶ್ಯೂರ್ ಜಿಲ್ಲೆಯಲ್ಲಿ ವರದಿಯಾಗಿತ್ತು. ಕೊರೋನಾ ಮೊದಲ ಬಲಿ ಪಡೆದದ್ದು ರಾಜ್ಯದ ಕಲಬುರ್ಗಿಯಲ್ಲಿ .