ನವದೆಹಲಿ: ದೇಶದಲ್ಲಿ ಕೊರೋನಾದ ಮಹಾ ಸ್ಫೋಟ ಮುಂದುವರಿದಿದೆ. ಕಳೆದ 24 ಗಂಟೆ ಅವಧಿಯಲ್ಲಿ ಕೊರೋನಾ 1114 ಮಂದಿಯ ಬಲಿಪಡೆದುಕೊಂಡಿದೆ. ಕೊರೋನಾದಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ ಇದೀಗ 78, 586ಕ್ಕೆ ತಲುಪಿದೆ. ಕಳೆದ 24 ಗಂಟೆ ಅವಧಿಯಲ್ಲಿ 94, 372 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ಇದೀಗ ಕೊರೋನಾ ಸೋಂಕಿತರ ಸಂಖ್ಯೆ 47, 54, 357ಕ್ಕೆ ತಲುಪಿದೆ. ಕೊರೋನಾ ಸೋಂಕಿಗೆ ತುತ್ತಾಗಿದ್ದ 37. 02, 596 ಮಂದಿ ಗುಣಮುಖರಾಗಿದ್ದಾರೆ.
ದೇಶದ ಆಸ್ಪತ್ರೆಗಳಲ್ಲಿ ಇದೀಗ ಕೊರೋನಾ ಸೋಂಕಿತ 9, 73, 175 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.