ನವದೆಹಲಿ: ಕೊರೋನಾದ ಅಬ್ಬರ ಮುಂದುವರಿದಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 86, 508 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ದೇಶದ ಕೊರೋನಾ ಸೋಂಕಿತರ ಸಂಖ್ಯೆ 57, 32, 519ಕ್ಕೆ ತಲುಪಿದೆ. 9, 66, 382 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ 24 ಗಂಟೆ ಅವಧಿಯಲ್ಲಿ ಕೊರೋನಾದಿಂದ 1129 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೊರೋನಾಕ್ಕೆ ಬಲಿಯಾದವರ ಸಂಖ್ಯೆ ಇದೀಗ 91, 149ಕ್ಕೆ ತಲುಪಿದೆ.
ಕೊರೋನಾ ಸೋಂಕಿತರಾಗಿದ್ದ 46, 74, 988 ಮಂದಿ ಗುಣಮುಖರಾಗಿದ್ದಾರೆ.