ನವದೆಹಲಿ: ದೇಶದಲ್ಲಿ ಮಾರಕ ಕೊರೋನಾದ ಮಹಾ ಸ್ಫೋಟ ಸಂಭವಿಸಿದೆ. ಕಳೆದ 24 ಗಂಟೆ ಅವಧಿಯಲ್ಲಿ 29, 429 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದು ಕೊರೋನಾ ಪ್ರಕರಣದ ಅತ್ಯಧಿಕ ದಾಖಲೆಯಾಗಿದೆ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹತ್ತು ಲಕ್ಷ ಸಮೀಪಿಸುವ ಅಂಚಿನಲ್ಲಿದೆ. ಇದೀಗ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 9, 36, 181ಕ್ಕೆ ತಲುಪಿದೆ.
ದೇಶದ ವಿವಿಧ ಆಸ್ಪತ್ರೆಗಳಲ್ಲಿ 3. 19. 840 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನಾ ಒಂದೇ ದಿನದಲ್ಲಿ 582 ಮಂದಿಯ ಪ್ರಾಣ ಅಪಹರಿಸಿದೆ. ಕೊರೋನಾಕ್ಕೆ ದೇಶದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಇದೀಗ 24, 309ಕ್ಕೆ ತಲುಪಿದೆ.
ಕೊರೋನಾ ದೇಶದ ಮೂಲೆ ಮೂಲೆಗೂ ಹರಡುತ್ತಿದೆ. ಕೊರೋನಾ ತಡೆಗಟ್ಟಲು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಮತ್ತೆ ಲಾಕ್ ಡೌನ್ ಮೊರೆ ಹೋಗಿವೆ.