ನವದೆಹಲಿ: ಮಾರಕ ಕೊರೋನಾ ಕಳೆದ 24 ಗಂಟೆ ಅವಧಿಯಲ್ಲಿ 37, 148 ಮಂದಿಯ ಮೇಲೆ ದಾಳಿ ನಡೆಸಿದೆ. ಕೊರೋನಾ ಸೋಂಕಿತರ ಸಂಖ್ಯೆ ಇದೀಗ 11, 55, 191ಕ್ಕೆ ತಲುಪಿದೆ. ದೇಶದ ಆಸ್ಪತ್ರೆಗಳಲ್ಲಿ 4,02, 529 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದೇ ದಿನದಲ್ಲಿ ಮಾರಕ ಕೊರೋನಾ 587 ಮಂದಿಯ ಪ್ರಾಣ ಅಪಹರಿಸಿದೆ. ಕೊರೋನಾದಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 28084ಕ್ಕೆ ತಲುಪಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿರುವುದು ಕೇಂದ್ರ ಸರ್ಕಾರದ ಕಳವಳಕ್ಕೆ ಕಾರಣವಾಗಿದೆ
ಕೊರೋನಾ ನಿಯಂತ್ರಿಸಲು ದಕ್ಷಿಣ ಭಾರತದ ರಾಜ್ಯಗಳಲ್ಲಿ ಲಾಕ್ ಡೌನ್ ಹೇರಲಾಗಿದ್ದರೂ ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ದಕ್ಷಿಣದ ರಾಜ್ಯಗಳಲ್ಲಿ ಮುಂಗಾರು ಮಳೆ ಅಬ್ಬರ ಕೂಡ ಹೆಚ್ಚಾಗಿದ್ದು ರೋಗ ನಿಯಂತ್ರಣಕ್ಕೆ ಸಮಸ್ಯೆ ಎದುರಾಗಿದೆ.