ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ಅಷ್ಟ ದಿಕ್ಕುಗಳಿಗೂ ಹರಡುತ್ತಿದೆ. ಕಳೆದ 24 ಗಂಟೆ ಅವದಿಯಲ್ಲಿ ಹೊಸದಾಗಿ 32, 695 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದು ಇದುವರೆಗಿನ ಅತ್ಯಧಿಕ ಪ್ರಕರಣವಾಗಿದೆ. ಜನವರಿ 30ರಂದು ದೇಶದಲ್ಲಿ ಮೊದಲ ಕೊರೋನಾ ಪ್ರಕರಣ ವರದಿಯಾಗಿತ್ತು.
ಕೊರೋನಾ ಸೋಂಕಿತರ ಸಂಖ್ಯೆ ಇದೀಗ ಹತ್ತು ಲಕ್ಷದ ಅಂಚಿನಲ್ಲಿದೆ. 9, 68, 876 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇವರಲ್ಲಿ 3, 31, 146 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ 24 ಗಂಟೆ ಅವಧಿಯಲ್ಲಿ ಮಾರಕ ಕೊರೋನಾ 606 ಮಂದಿಯ ಪ್ರಾಣ ಅಪಹರಿಸಿದೆ. ಕೊರೋನಾದಿಂದ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 24, 915ಕ್ಕೆ ತಲುಪಿದೆ.
ಸಮುದಾಯ ಮಟ್ಟದಲ್ಲಿ ಹರಡುವ ಭೀತಿ
ಇನ್ನೊಂದೆಡೆ ಕೇರಳದಲ್ಲಿ ಮಾರಕ ಕೊರೋನಾ ಸಮುದಾಯ ಮಟ್ಟದಲ್ಲಿ ಹರಡುವ ಭೀತಿ ಎದುರಾಗಿದೆ. ಸಂಪರ್ಕದಿಂದಾಗಿ ಕೊರೋನಾ ರೋಗಕ್ಕೆ ತುತ್ತಾಗುತ್ತಿರುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ತಿರುವನಂತಪುರಂ, ಕಾಸರಗೋಡು ಸೇರಿದಂತೆ ಹಲವು ನಗರಗಳಲ್ಲಿ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ