ನವದೆಹಲಿ: ಕಳೆದ 24 ಗಂಟೆ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 48, 661 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದು ಒಂದೇ ದಿನ ವರದಿಯಾದ ದಾಖಲೆ ಕೊರೋನಾ ಪ್ರಕರಣವಾಗಿದೆ. ದೇಶದಲ್ಲಿನ ಕೊರೋನಾ ಸೋಂಕಿತರ ಸಂಖ್ಯೆ ಇದೀಗ 13, 85, 522ಕ್ಕೆ ತಲುಪಿದೆ.
ದೇಶದ ನಿಯೋಜಿತ ಕೊರೋನಾ ಆಸ್ಪತ್ರೆಗಳಲ್ಲಿ 4, 67, 882 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳದ 24 ಗಂಟೆ ಅವಧಿಯಲ್ಲಿ ಕೊರೋನಾದಿಂದ 705 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೊರೋನಾಕ್ಕೆ ಮೃತಪಟ್ಟವರ ಸಂಖ್ಯೆ 32, 063ಕ್ಕೆ ಮುಟ್ಟಿದೆ.
ದಕ್ಷಿಣ ಭಾರತ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಇದೀಗ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ