ಬೀಜಿಂಗ್: ಕೊರೊನ ವೈರಸ್ ನಿಂದಾಗಿ ಬಿಯರ್ ಕೂಡ ಪ್ರಸಿದ್ಧಿಗೆ ಬಂದಿದೆ.
ಇದಕ್ಕೆ ಕಾರಣ, ಕೊರೊನ ಹೆಸರಿನ ಬಿಯರ್ ಮಾರುಕಟ್ಟೆಯಲ್ಲಿರುವುದು ಈ ಗೊಂದಲಕ್ಕೆ ಕಾರಣವಾಗಿದೆ.
ಜಗತ್ತಿನಾದ್ಯಂತ ಭೀತಿ ಹುಟ್ಟಿಸಿರುವ ಈ ವೈರಸ್ ಬಗ್ಗೆ ತಿಳಿದುಕೊಳ್ಳಲು ಜನರು ಗೂಗಲ್ ಸರ್ಚ್ ಮಾಡುತ್ತಿದ್ದಾರೆ. ಸರ್ಚ್ ಮಾಡುವ ಭರದಲ್ಲಿ ಬಿಯರ್ ಬಗ್ಗೆಯೂ ತಿಳಿಯುತ್ತಿದ್ದಾರೆ.
ವಿಷಯ ಇಷ್ಟೇ ಅಲ್ಲ, ವೈರಸ್ಗೂ ಕೊರೊನ ಬಿಯರ್ ಗೂ ಸಂಬಂಧವಿದೆ ಎಂದು ಜನ ಭಾವಿಸಿಬಿಟ್ಟಿದ್ದಾರೆ.
ಆದರೆ ಬಿಯರ್ಗೂ ಈ ವೈರಸ್ಗೂ ಯಾವುದೇ ಸಂಬಂಧವಿಲ್ಲ. ಕೊರೊನ ಬಿಯರ್ 1925 ರಿಂದಲೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ವಾಸಕೋಶ ಸಂಬಂಧಿ ಸಮಸ್ಯೆಯಾದ ಈ ಕೊರೊನ ವೈರಸ್ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಸಹ ಗಂಭೀರವಾಗಿ ಪರಿಗಣಿಸಿದ್ದು, ಚೀನಾದಲ್ಲಿ ತುರ್ತು ಪರಿಸ್ಥಿತಿ ನೆಲೆಸಿದೆ ಎಂಬುದನ್ನು ಒಪ್ಪಿಕೊಂಡಿದೆ.
ಚೀನಾದ 16 ಕ್ಕೂ ಹೆಚ್ಚು ನಗರಗಳು ಕೊರೊನ ವೈರಸ್ ಕಾರಣದಿಂದ ಲಾಕ್ ಡೌನ್ ಆಗಿದ್ದು, ನೆರೆಯ ದೇಶಗಳಾದ ದಕ್ಷಿಣ ಕೊರಿಯಾ, ಭಾರತ, ಜಪಾನ್, ಥಾಯ್ಲೆಂಡ್, ತೈವಾನ್, ಅಮೆರಿಕಗಳಲ್ಲೂ ಪ್ರಕರಣಗಳು ದಾಖಲಾಗಿವೆ.
ಬಿಯರ್ ಪ್ರಿಯರಿಗೆ ‘ಕೊರೊನ’ ಗೊಂದಲ!
Follow Us