Monday, November 29, 2021

ಲಕ್ಷ ಜನರನ್ನು ಬಲಿ ಪಡೆದ ಕೊರೋನಾ, ಮುಗಿಯದ ರುದ್ರನರ್ತನ

Follow Us

ನ್ಯೂಯಾರ್ಕ್: ಕೋವಿಡ್ 19 ವೈರಸ್ ಮಹಾಮಾರಿ ಶುಕ್ರವಾರವದುy ಬರೋಬ್ಬರಿ ಒಂದು ಲಕ್ಷ ಜನರನ್ನು ಬಲಿ ತೆಗೆದುಕೊಂಡಿದೆ. ಭಾರತ, ಅಮೆರಿಕ ಸೇರಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಈ ಮಹಾಮಾರಿಯ ರುದ್ರ ನರ್ತನ ಮುಂದುವರೆದಿದೆ.
ವಿಶ್ವಾದ್ಯಂತ ಸೋಂಕುಪೀಡಿತರ ಸಂಖ್ಯೆ 16.5 ಲಕ್ಷಕ್ಕೇರಿದೆ. 3.72 ಲಕ್ಷ ಜನ ಈ ಸೋಂಕಿಗೆಗೆ ತುತ್ತಾಗಿಯೂ ಚೇತರಿಸಿಕೊಂಡಿದ್ದಾರೆ.
ಅಮೆರಿಕದಲ್ಲಿ ಹೊಸದಾಗಿ 21 ಸಾವಿರ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು 1343 ಹೊಸ ಸಾವಿನ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ಅಮೆರಿಕಾದಲ್ಲಿ ಒಟ್ಟಾರೆ ಸೋಂಕು ಪೀಡಿತರ ಸಂಖ್ಯೆ489,646ಕ್ಕೆ ಏರಿದ್ದು ಇದುವರೆಗೆ ಇಲ್ಲಿ 21 ಸಾವಿರ ಜನ ಮೃತಪಟ್ಟಿದ್ದಾರೆ.
ಸ್ಪೈನ್ ದೇಶದಲ್ಲಿ 3831 ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ. ಇಲ್ಲಿ ಇದುವರೆಗೆ 157,053 ಜನ ಸೋಂಕಿತರಾಗಿದ್ದು 15,970 ಸಾವು ಸಂಭವಿಸಿದೆ. ಅತೀ ಹೆಚ್ಚು ಕೋವಿಡ್ ಸೋಂಕುಪೀಡಿತ ರಾಷ್ಟ್ರಗಳ ಸಾಲಿನಲ್ಲಿ ಇಟಲಿ ಮೂರನೇ ಸ್ಥಾನದಲ್ಲಿದೆ. 147,577 ಕೋವಿಡ್ ಸೋಂಕು ಪೀಡಿತರಲ್ಲಿ 18,849 ಜನ ಸಾವನ್ನಪ್ಪಿದ್ದಾರೆ. ಫ್ರಾನ್ಸ್ ನಲ್ಲಿ 124, 869 ಜನ ಕೋವಿಡ್ ಸೋಂಕು ಪೀಡಿತರಾಗಿದ್ದಾರೆ ಹಾಗೂ 13,917 ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಜರ್ಮನಿಯಲ್ಲಿ 119,624 ಸೋಂಕು ಪೀಡಿತರಲ್ಲಿ 2,607 ಜನ ಸಾವನ್ನಪ್ಪಿದ್ದರೆ 52,407 ಜನ ಇದರಿಂದ ಚೇತರಿಸಿಕೊಂಡಿದ್ದಾರೆ. ಆದರೆ ಜರ್ಮನಿಯಲ್ಲಿ ಮತ್ತೆ 1,389 ಹೊಸ ಸೋಂಕು ಪ್ರಕರಣಗಳು ವರದಿಯಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಇನ್ನುಳಿದಂತೆ ಇಂಗ್ಲೆಂಡ್ ನಲ್ಲಿ 8,681 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಇಲ್ಲಿ ಸೋಂಕಿತರ ಸಂಖ್ಯೆ 73,758ಕ್ಕೆ ಏರಿಕೆಯಾಗಿದೆ ಮತ್ತು ಒಂದೇ ದಿನದಲ್ಲಿ 980 ಜನ ಸಾವಿಗೀಡಾಗುವುದರೊಂದಿಗೆ ಇಲ್ಲಿ ಒಟ್ಟು ಸಾವಿನ ಸಂಖ್ಯೆ 8,958ಕ್ಕೆ ಏರಿಕೆಯಾಗಿದೆ. ಇರಾನ್ ನಲ್ಲಿ 68,192 ಸೋಂಕು ಪೀಡಿತರು 4,232 ಸಾವು, ಟರ್ಕಿಯಲ್ಲಿ 47,029 ಸೋಂಕಿತರು ಹಾಗೂ ಸಾವಿನ ಸಂಖ್ಯೆ 1,006 ದಾಟಿದೆ. ಭಾರತದಲ್ಲಿ 7,598 ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು 873 ಹೊಸ ಸೋಂಕು ಪ್ರಕರಣಗಳು ಒಂದೇ ದಿನದಲ್ಲಿ ಪತ್ತೆಯಾಗಿದೆ. ಇಲ್ಲಿ ಒಟ್ಟು ಸಾವಿನ ಸಂಖ್ಯೆ 246 ಆಗಿದೆ. 774 ಜನ ಸೋಂಕಿತರು ಚೇತರಿಸಿಕೊಂಡಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಮಹಿಳಾ ಸಂಸದರೊಂದಿಗೆ ಸೆಲ್ಫಿ ಶೇರ್ ಮಾಡಿ ಲೋಕಸಭೆ ಆಕರ್ಷಕ ಸ್ಥಳ ಎಂದ ಶಶಿ ತರೂರ್, ಕ್ಷಮೆಯಾಚನೆ

newsics.com ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್, ಆರು ಮಹಿಳಾ ಸಂಸದರೊಂದಿಗೆ ತೆಗೆದ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. "ಲೋಕಸಭೆಯು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ?"...

ಭಾರತ – ನ್ಯೂಜಿಲೆಂಡ್ ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯ

newscis.com ಕಾನ್ಪುರ: ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಮಂದ ಬೆಳಕಿನಿಂದ ಪಂದ್ಯವನ್ನು ನಿಲ್ಲಿಸಬೇಕಾಯಿತು. ನಾಲ್ಕು ವರ್ಷಗಳಲ್ಲಿ ಭಾರತದ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್...

ಯುಎಇಯಲ್ಲಿ ಅತಿದೊಡ್ಡ ಕಾನೂನು ಸುಧಾರಣೆ: 40 ಕಾನೂನುಗಳ ಬದಲಾವಣೆ

newsics.com ಯುಎಇ: ಇಲ್ಲಿನ ಸರ್ಕಾರವು ತನ್ನ ಇತಿಹಾಸದಲ್ಲೇ ಅತಿ ದೊಡ್ಡ ಕಾನೂನು ಸುಧಾರಣೆ ನಡೆಸಲು ಮುಂದಾಗಿದ್ದು, 40 ಕಾನೂನುಗಳನ್ನು ಬದಲಾಯಿಸಲಿದೆ. ವಿವಿಧ ವಿಭಾಗಗಳ ಕಾನೂನುಗಳಲ್ಲಿ ಬದಲಾವಣೆಗಳಾಗಲಿವೆ. ಮದುವೆಯ ಮೊದಲು ಸಮ್ಮತಿಯ ಲೈಂಗಿಕ ಸಂಬಂಧಗಳ ಅಪರಾಧೀಕರಣದ ಕುರಿತಾದ...
- Advertisement -
error: Content is protected !!