ಬೆಂಗಳೂರು: ರಾಜಧಾನಿಯ ಮೂಲೆ ಮೂಲೆಯನ್ನೂ ಕೊರೋನಾ ಮಹಾಮಾರಿ ಆವರಿಸಿಕೊಂಡಿದೆ.
ನಗರದ ಎಲ್ಲ 198 ವಾರ್ಡ್ಗಳಿಗೂ ಕೊರೋನಾ ಸೋಂಕು ಕಾಲಿಟ್ಟಿದೆ. 87 ವಾರ್ಡ್ಗಳು ಡೇಂಜರ್ ಝೋನ್ನಲ್ಲಿವೆ. 87 ವಾರ್ಡ್ಗಳಲ್ಲಿ ನೂರಕ್ಕೂ ಹೆಚ್ಚು ಸೋಂಕಿತರು ಕಾಣಿಸಿಕೊಂಡಿದೆ.
ಸೋಂಕಿತರು ಹೆಚ್ಚಾಗುತ್ತಿರುವುದರಿಂದ ನಗರದಲ್ಲಿ ಕಂಟೈನ್ಮೆಂಟ್ ಝೋನ್ಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಸೋಮವಾರ (ಜುಲೈ 27) ಒಂದೇ ದಿನ 594 ರಸ್ತೆಗಳನ್ನು ಸೀಲ್ಡೌನ್ ಮಾಡಲಾಗಿದೆ. ಹೀಗಾಗಿ ನಗರದ ಬಹುತೇಕ ರಸ್ತೆಗಳು ಸೀಲ್ಡೌನ್ ಆಗಿವೆ. ಇದುವರೆಗೆ 16,005 ರಸ್ತೆಗಳನ್ನು ಕಂಟೈನ್ಮೆಂಟ್ ಝೋನ್ಗಳೆಂದು ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ 12,325 ಆಕ್ಟಿವ್ ಕಂಟೈನ್ಮೆಂಟ್ ಝೋನ್ಗಳಾಗಿವೆ.
ಬೆಂಗಳೂರಲ್ಲಿ 1898, ರಾಜ್ಯದಲ್ಲಿ 5,536 ಮಂದಿಗೆ ಸೋಂಕು, 102 ಬಲಿ
87ಕ್ಕೂ ಹೆಚ್ಚು ವಾರ್ಡ್ಗಳಲ್ಲಿ ನೂರು ಸೋಂಕಿತರಿದ್ದರೆ, 50 ವಾರ್ಡ್ಗಳಲ್ಲಿ 81ಕ್ಕೂ ಹೆಚ್ಚು ಸೋಂಕಿತರಿದ್ದಾರೆ. 43 ವಾರ್ಡ್ಗಳಲ್ಲಿ 61ಕ್ಕೂ ಹೆಚ್ಚು ಸೋಂಕಿತರು ಹಾಗೂ 18 ವಾರ್ಡ್ಗಳಲ್ಲಿ 41ಕ್ಕೂ ಹೆಚ್ಚು ಸೋಂಕಿತರಿದ್ದಾರೆ.
ನಗರದ ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಕಂಟೈನ್ಮೆಂಟ್ ಝೋನ್ಗಳಿವೆ. ಈ ವಲಯದಲ್ಲಿ 3935 ಝೋನ್ಗಳಿದ್ದರೆ, ಪಶ್ಚಿಮದಲ್ಲಿ 2256, ಪೂರ್ವದಲ್ಲಿ 1770, ಬೊಮ್ಮನಹಳ್ಳಿಯಲ್ಲಿ 1558, ಆರ್.ಆರ್. ನಗರದಲ್ಲಿ 1124, ಮಹದೇವಪುರದಲ್ಲಿ 937, ಯಲಹಂಕ 437 ಹಾಗೂ ದಾಸರಹಳ್ಳಿಯಲ್ಲಿ 318 ರಸ್ತೆಗಳನ್ನು ಸೀಲ್ಡೌನ್ ಮಾಡಲಾಗಿದೆ.