ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಕೊರೋನಾ ಸೋಂಕಿತರ ಸಂಖ್ಯೆ ಒಂದು ಲಕ್ಷ ಗಡಿ ದಾಟಿದೆ. ಸೋಮವಾರ 5,324 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 1,01465ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಸೋಮವಾರ 75 ಜನರು ಕೊರೋನಾಗೆ ಬಲಿಯಾಗಿದ್ದಾರೆ. ಹೀಗಾಗಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 1953ಕ್ಕೆ ಏರಿಕೆಯಾಗಿದೆ.
ಹದಿಮೂರು ವರುಷ ಐಸೋಲೇಷನ್’ನಲ್ಲೇ ಬದುಕು!
ಬೆಂಗಳೂರು ನಗರ ಜಿಲ್ಲೆಯಲ್ಲಿ 1470 ಕೋವಿಡ್ 19 ಸೊಂಕು ಪ್ರಕರಣಗಳು ಪತ್ತೆಯಾಗಿವೆ. ಆ ಬಳಿಕದ ಸ್ಥಾನದಲ್ಲಿ ಬಳ್ಳಾರಿ (840), ಕಲಬುರಗಿ (631), ಮೈಸೂರು (296), ಉಡುಪಿ (225), ಧಾರವಾಡ (193), ಬೆಳಗಾವಿ (155), ಕೋಲಾರ (142), ಬೆಂಗಳೂರು ಗ್ರಾಮಾಂತರ (138), ರಾಯಚೂರು (120), ದಕ್ಷಿಣ ಕನ್ನಡ (119), ವಿಜಯಪುರ (110) ಮತ್ತು ದಾವಣಗೆರೆ (110) ಜಿಲ್ಲೆಗಳಿವೆ. ತುಮಕೂರು – 89, ಶಿವಮೊಗ್ಗ – 76, ಹಾಸನ – 66, ಯಾದಗಿರಿ – 64, ಗದಗ – 63, ರಾಮನಗರ – 62, ಮಂಡ್ಯ – 56, ಚಿತ್ರದುರ್ಗ – 51, ಬೀದರ್ – 42, ಚಿಕ್ಕಬಳ್ಳಾಪುರ – 40, ಉತ್ತರ ಕನ್ನಡ – 32, ಕೊಪ್ಪಳ – 28, ಬಾಗಲಕೋಟೆ – 27, ಹಾವೇರಿ – 27, ಚಿಕ್ಕಮಗಳೂರು – 26, ಚಾಮರಾಜನಗರ – 16 ಮತ್ತು ಕೊಡಗು – 10 ಸೇರಿದಂತೆ ರಾಜ್ಯದ ಒಟ್ಟು 30 ಜಿಲ್ಲೆಗಳಲ್ಲಿ ಸೋಮವಾರ ಮೂರಂಕಿ ಹಾಗೂ ಎರಡಂಕಿಯ ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,01465ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇದುವರೆಗೆ 37,685 ಜನ ಸೋಂಕಿತರು ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿರುವ ಕಾರಣ, ರಾಜ್ಯದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 61,819ಕ್ಕೆ ಏರಿಕೆಯಾಗಿದೆ ಎಂಬುದಾಗಿ ತಿಳಿಸಿದೆ. ಸೋಮವಾರ ಒಂದೇ ದಿನ 1847 ಜನರು ಚೇತರಿಕೆ ಕಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ, 61819 ಕೇಸ್ ಸಕ್ರಿಯವಾಗಿದೆ. ಇದುವರೆಗೂ 37685 ಜನರು ಡಿಸ್ಚಾರ್ಜ್ ಆಗಿದ್ದಾರೆ. 598 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.