newsics.com
ಕೊರೋನ ವೈರಾಣುವಿನಿಂದ ಬಳಲಿದವರಿಗೆ ಪಾರ್ಕಿನ್ಸನ್ ರೋಗದಲ್ಲಿ ಕಂಡುಬರುವ ಮೆದುಳು ಕ್ಷೀಣಿಸುವ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಕೋವಿಡ್-19 ರೋಗಿಗಳಿಗೆ ಸಾಮಾನ್ಯವಾಗಿ ಬ್ರೈನ್ ಫಾಗ್, ತಲೆನೋವು ಮತ್ತು ನಿದ್ರಾಹೀನತೆ, ತೊಡಕುಗಳ ಲಕ್ಷಣ ಕಂಡುಬಂದಿದ್ದು, ವೈರಲ್ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಇದು ಸಾಮಾನ್ಯವಾಗಿದೆ ಎನ್ನುತ್ತಿದ್ದಾರೆ ಸಂಶೋಧಕರು.
ಮೂವ್ಮೆಂಟ್ ಡಿಸಾರ್ಡರ್ಸ್ ಎಂಬ ಜರ್ನಲ್ ನಲ್ಲಿ ಈ ಅಧ್ಯಯನ ವರದಿ ಪ್ರಕಟಗೊಂಡಿದ್ದು, ಈ ವರದಿಯ ಪ್ರಕಾರ ಪಾರ್ಕಿನ್ಸನ್ ರೋಗದಲ್ಲಿ ಕಂಡುಬರುವ ನರಜೀವಕೋಶಗಳ ಕ್ಷೀಣಿಸುವಿಕೆಗೆ ಕಾರಣವಾಗುವ ಜೀವಾಣು ವಿಷಕ್ಕೆ ಮೆದುಳಿನ ಸಂವೇದನೆಯನ್ನು ಕೋವಿಡ್ ವೈರಾಣು ಹೆಚ್ಚಿಸುತ್ತದೆ ಎಂದು ತಿಳಿಸಿದೆ.