Friday, May 20, 2022

ಖಾಸಗಿ ಲ್ಯಾಬ್’ಗಳಲ್ಲಿನ ಕೊರೋನಾ ತಪಾಸಣೆ ದರ ಮತ್ತೆ ಇಳಿಕೆ

Follow Us

newsics.com
ಬೆಂಗಳೂರು: ಖಾಸಗಿ ಲ್ಯಾಬ್’ಗಳಲ್ಲಿನ ಕೊರೋನಾ ತಪಾಸಣೆಯ ದರವನ್ನು ರಾಜ್ಯ ಸರ್ಕಾರ ಮತ್ತೆ ಇಳಿಸಿದೆ.
ಹೊಸ ದರದ ಪ್ರಕಾರ ರೂ.1,200 ಹಾಗೂ ರೂ.1,600 ರೂ. ನಿಗದಿಪಡಿಸಿದೆ.
ಈ ಮೊದಲು ಕೊರೋನಾ ಸೋಂಕಿನ ಪರೀಕ್ಷೆಗಾಗಿ ಖಾಸಗಿ ಲ್ಯಾಬ್ ಗಳಿಗೆ ರೂ.2000 ಹಾಗೂ ರೂ.3000 ದರ ನಿಗದಿ ಪಡಿಸಿತ್ತು. ಈ ಬಳಿಕ ಮತ್ತೆ ದರದಲ್ಲಿ ಕಡಿತಗೊಳಿಸಿ ರೂ.1,500 ಹಾಗೂ ರೂ.2,500ಕ್ಕೆ ಇಳಿಕೆ ಮಾಡಿತ್ತು. ಇದೀಗ ಈ ದರದಲ್ಲಿ ಮತ್ತೆ ಕಡಿತ ಮಾಡಿದ್ದು, ರೂ.1,200 ಹಾಗೂ ರೂ.1,600ಕ್ಕೆ ಇಳಿಕೆ ಮಾಡಿದೆ.
ರಾಜ್ಯದಲ್ಲಿ ಕೊರೋನಾ ಸೋಂಕು ಪತ್ತೆ ಕಾರ್ಯವನ್ನು ರಾಜ್ಯ ಸರ್ಕಾರ ಚುರುಕುಗೊಳಿಸಿದೆ. ಅದರಲ್ಲೂ ಆರ್ ಟಿ ಪಿಸಿಆರ್ ಪರೀಕ್ಷೆಯ ಮೂಲಕ ಸೋಂಕು ಪತ್ತೆ ಹಚ್ಚುವ ಸಂಖ್ಯೆಯನ್ನು ಹೆಚ್ಚಿಸಲು ಸೂಚಿಸಿದೆ. ಈ ಮಧ್ಯೆ, ಖಾಸಗಿ ಲ್ಯಾಬ್ ಗಳಲ್ಲಿಯೂ ಸೋಂಕು ಪತ್ತೆ ಪರೀಕ್ಷೆಯನ್ನು ಸುಲಭ, ತ್ವರಿತಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇದೀಗ ಕ್ರಮ ಕೈಗೊಂಡಿದೆ. ಇದಕ್ಕಾಗಿಯೇ ಕೊರೋನಾ ಲ್ಯಾಬ್ ಪರೀಕ್ಷೆಯ ದರದಲ್ಲಿ ಇಳಿಕೆ ಮಾಡಿದೆ.

ಆರ್ಥಿಕ ತಜ್ಞೆ ಐಷರ್ ಅಹ್ಲುವಾಲಿಯಾ ಇನ್ನಿಲ್ಲ

ವಯಸ್ಕ ಮಹಿಳೆ ತನ್ನ ವೃತ್ತಿ ಆಯ್ಕೆಗೆ ಸ್ವತಂತ್ರಳು- ಬಾಂಬೆ ಹೈಕೋರ್ಟ್

 

ಇನ್ಸ್ಟಾಗ್ರಾಂನಲ್ಲಿ ಖಾತೆ ತೆರೆದ 5 ಗಂಟೆಯೊಳಗೆ 10 ಲಕ್ಷ ಫಾಲೋವರ್ಸ್!

ಮತ್ತಷ್ಟು ಸುದ್ದಿಗಳು

Latest News

ಮಾತುಗಾರರ ಶೋಧಕ್ಕೆ ಮುಂದಾದ ಕಾಂಗ್ರೆಸ್‌ನಿಂದ ಭಾಷಣ ಸ್ಪರ್ಧೆ: ವಿಜೇತರಿಗೆ ಐಫೋನ್ ಬಹುಮಾನ

newsics.com ಬೆಂಗಳೂರು: ಯುವ ಮಾತುಗಾರರ ಶೋಧಕ್ಕೆ ಮುಂದಾಗಿರುವ ಕಾಂಗ್ರೆಸ್, ಇದಕ್ಕಾಗಿ ಭಾಷಣ ಸ್ಪರ್ಧೆಯನ್ನು ಆಯೋಜಿಸಿದೆ. ರಾಜ್ಯಮಟ್ಟದ ಈ ಭಾಷಣ ಸ್ಪರ್ಧೆಯಲ್ಲಿ ಗೆಲ್ಲುವ ಮಾತುಗಾರರಿಗೆ ಐಫೋನ್ ಸಿಗಲಿದೆ. ಅಷ್ಟೇ ಅಲ್ಲ,...

ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ಕಾರು, ನಾಲ್ವರನ್ನು ರಕ್ಷಿಸಿದ ಗ್ರಾಮಸ್ಥರು

newsics.com ಗದಗ: ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ಕಾರು ಹಾಗೂ ಅದರಲ್ಲಿದ್ದ ನಾಲ್ವರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕುನ ನೆಲೋಗಲ್ ಗ್ರಾಮದ ಬಳಿ ಶುಕ್ರವಾರ ಈ ಘಟನೆ ನಡೆದಿದೆ. ನಿರಂತರ ಮಳೆಯಿಂದಾಗಿ ನೆಲೋಗಲ್-ಬೆಳ್ಳಟ್ಟಿ...

ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿ‌ ಬಂಧನ

newsics.com ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿ ಸುಭಾಷ್ ಗುಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಭಾವನ ಮೇಲೆ ಸೇಡು ತೀರಿಸಿಕೊಳ್ಳಲು ಬೆದರಿಕೆ ಕರೆ ಮಾಡಿದ್ದ ಸುಭಾಷ್, ವಿಚ್ಛೇದಿತ...
- Advertisement -
error: Content is protected !!