ನವದೆಹಲಿ: 2020ರ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಕೊರೋನಾ ಸೋಂಕು ನಿರೋಧಕ ಕೋವಾಕ್ಸಿನ್ ಲಸಿಕೆ ಸಿದ್ಧವಾಗುವ ಸಾಧ್ಯತೆ ಇದೆ ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೆರಿಯಾ ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕು ಗರಿಷ್ಠ ಮಟ್ಟಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಕಂಡು ಹಿಡಿಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಗುಲೆರಿಯಾ ಸೋಮವಾರ ಮಾಧ್ಯಮದವರಿಗೆ ತಿಳಿಸಿದರು.
ಮೂರು ಹಂತಗಳಲ್ಲಿ ಕೋವಾಕ್ಸಿನ್ ಲಸಿಕೆ ಪ್ರಯೋಗ ನಡೆಯಬೇಕಿದೆ. ಎಲ್ಲವೂ ಅಂದುಕೊಂಡಂತೆ ಆದರೆ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಲಸಿಕೆ ಸಿದ್ಧಗೊಳ್ಳಬಹುದು ಎಂದರು. ಮೊದಲ ಹಂತದಲ್ಲಿ 18ರಿಂದ 55 ವರ್ಷದೊಳಗಿನ ಸುಮಾರು 375 ಸೋಂಕಿತರ ಮೇಲೆ ಪ್ರಯೋಗಿಸಲಾಗುವುದು. ಈ ವರದಿ ಬರಲು 4ರಿಂದ 6 ತಿಂಗಳು ಬೇಕು. ಮೊದಲ ಹಂತ ಯಶಸ್ಸುಗೊಂಡ ನಂತರ ಎರಡನೇ ಹಂತದ ವೇಳೆ 12ರಿಂದ 65 ವರ್ಷದೊಳಗಿನ 765 ಸೋಂಕಿತರ ಮೇಲೆ ಪ್ರಯೋಗಿಸಲಾಗುವುದು. ಇದರಲ್ಲಿ ಮನುಷ್ಯರ ದೇಹದಲ್ಲಿ ರೋಗ ನಿರೋಧಕ ಹೆಚ್ಚಳದ ಬಗ್ಗೆ ಗಮಹರಿಸಲಾಗುವುದು ಎಂದು
ಏಮ್ಸ್ ನಿರ್ದೇಶಕ ಗುಲೆರಿಯಾ ಸ್ಪಷ್ಟಪಡಿಸಿದರು.
ಪ್ರಯೋಗಕ್ಕೆ ಸಜ್ಜು:
ಭಾರತ ವೈರಾಲಜಿ ಸಂಸ್ಥೆ (ಎನ್ಐವಿ) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಸ್ಥಳೀಯ ಲಸಿಕೆಯ ಪ್ರಯೋಗವನ್ನು ಪ್ರಾರಂಭಿಸಲು ಭಾರತ ಸಜ್ಜಾಗಿದೆ. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ, ಕೊವಾಕ್ಸಿನ್ ಎಂಬ ಲಸಿಕೆಯ ಹಂತ 1 ಪ್ರಯೋಗವನ್ನು 18-55 ವರ್ಷ ವಯಸ್ಸಿನ ಜನರ ಮೇಲೆ ಸೋಮವಾರದಿಂದ ಪ್ರಯೋಗ ಶುರುವಾಗಿದೆ ಎಂದ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೆರಿಯಾ, ಕೋವಾಕ್ಸಿನ್ ಪ್ರಯೋಗಕ್ಕಾಗಿ ಸಂಗ್ರಹಿಸಿದ 1125 ಮಾದರಿಗಳಲ್ಲಿ ಒಟ್ಟು 375 ಮಾದರಿಗಳನ್ನು ಮೊದಲ ಹಂತದಲ್ಲಿ ಬಳಸಲಾಗುವುದು. ಉಳಿದ 750 ಮಾದರಿಗಳನ್ನು ಎರಡನೇ ಹಂತದಲ್ಲಿ ಪ್ರಯತ್ನಿಸಲಾಗುವುದು 12 ರಿಂದ 65 ವರ್ಷದೊಳಗಿನ ಜನರನ್ನು ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದರು. ಭಾರತ್ ಬಯೋಟೆಕ್ ಎನ್ಐವಿ ಸಹಭಾಗಿತ್ವದಲ್ಲಿ ಹೈದರಾಬಾದ್’ನ ಜೀನೋಮ್ ವ್ಯಾಲಿಯಲ್ಲಿ ತನ್ನ ಹೆಚ್ಚಿನ ಧಾರಕ ಸೌಲಭ್ಯದಲ್ಲಿ (ಜೈವಿಕ ಸುರಕ್ಷತೆ ಮಟ್ಟ 3) ಕೋವಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದೆ.
ಡಿಸೆಂಬರ್ ಅಥವಾ ಜನವರಿ ವೇಳೆಗೆ ಕೊರೋನಾ ಲಸಿಕೆ- ಏಮ್ಸ್ ವಿಶ್ವಾಸ
Follow Us