ಸಿವಿಟವೆಚಿಯ: ಇಟಲಿಯಲ್ಲಿ ಪ್ರವಾಸಿ ಹಡಗೊಂದರಲ್ಲಿ ಎರಡು ಶಂಕಿತ ಕೊರೊನ ವೈರಸ್ ಪ್ರಕರಣ ಪತ್ತೆಯಾದ್ದರಿಂದ ಹಡಗಿಗೆ ಬೀಗಮುದ್ರೆ ಹಾಕಲಾಗಿದ್ದು, 7,000ಕ್ಕೂ ಅಧಿಕ ಪ್ರವಾಸಿಗರು ಹಡಗಿನಲ್ಲೇ ಬಂದಿಯಾಗಿದ್ದರೆ.
ಜ್ವರದಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಸಿವಿಟವೆಚಿಯ ಬಂದರಿನಲ್ಲಿರುವ ‘ಕೋಸ್ಟ್ ಕ್ರೋಶಿಯರ್’ ಹಡಗಿನ ಒಳಗೆ ಮೂವರು ವೈದ್ಯರು ಮತ್ತು ಓರ್ವ ನರ್ಸ್ ತೆರಳಿದ್ದಾರೆ. ಚೀನಿ ದಂಪತಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಮಕಾವುನ 54 ವರ್ಷದ ಮಹಿಳೆ ಮತ್ತು ಅವರ ಸಂಗಾತಿಯನ್ನು ಹಡಗಿನಲ್ಲಿರುವ ಆಸ್ಪತ್ರೆಯ ಪ್ರತ್ಯೇಕ ಸ್ಥಳದಲ್ಲಿ ಇರಿಸಲಾಗಿದೆ ಎಂದು ಹಡಗು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನ ವೈರಸ್: ಹಡಗಿನಲ್ಲೇ 7000 ಪ್ರವಾಸಿಗರು ಬಂದಿ
Follow Us