ಬೀಜಿಂಗ್: ಹನ್ನೆರಡಕ್ಕೂ ಹೆಚ್ಚು ದೇಶಗಳಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಹರಡಿದ್ದು, ಕಟ್ಟೆಚ್ಚರದ ನಡುವೆಯೂ ಈ ವೈರಸ್ ನ ಸೋಂಕು ತೀವ್ರವಾಗಿ ವ್ಯಾಪಿಸುತ್ತಿದೆ.
ಭಾರತದಲ್ಲಿ 20 ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಹಾಂಕಾಂಗ್‌ನಲ್ಲಿ 5 ಮಂದಿಗೆ ಹಾಗೂ ಮಕಾವೊನಲ್ಲಿ ಇಬ್ಬರಿಗೆ ಈ ರೋಗ ತಗಲಿರುವುದಾಗಿ ತಿಳಿದುಬಂದಿದೆ.
ಥೈಲ್ಯಾಂಡ್, ತೈವಾನ್, ಜಪಾನ್, ದಕ್ಷಿಣ ಕೊರಿಯ, ಅಮೆರಿಕ, ವಿಯೆಟ್ನಾಮ್,ಸಿಂಗಾಪುರ, ಮಲೇಶ್ಯಾ, ನೇಪಾಳ, ಫ್ರಾನ್ಸ್, ಕೆನಡಾ ಹಾಗೂ ಆಸ್ಟ್ರೇಲಿಯಗಳಲ್ಲಿ ಈ ರೋಗದ ಸೋಂಕು ಹರಡಿರುವುದು ಪತ್ತೆಯಾಗಿದೆ.
ಚೀನಾದ್ಯಂತ ಒಟ್ಟು 3,234 ಕೊರೋನ ವೈರಸ್ ಸೋಂಕಿನ ಪ್ರಕರಣಗಳು ದೃಢಪಟ್ಟಿರುವುದಾಗಿ ರಾಷ್ಟ್ರೀಯ ಆರೋಗ್ಯ ಆಯೋಗ ಘೋಷಿಸಿದೆ.
ಸೋಂಕು ಹರಡುವುದನ್ನು ತಡೆಯಲು ಚೀನಾ ಹೊಸ ವರ್ಷದ ರಜೆಗಳನ್ನು ಇನ್ನೂ ಮೂರು ದಿನ ವಿಸ್ತರಿಸಿದೆ.
ಚೀನಾದ ವಿವಿಧೆಡೆ ಕೊರೋನ ವೈರಸ್‌ನ 869 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 30 ಸಾವಿರಕ್ಕೂ ಅಧಿಕ ಮಂದಿಯನ್ನು ವೈದ್ಯಕೀಯ ನಿಗಾದಲ್ಲಿರಿಸಲಾಗಿದೆ ಎಂದು ಚೀನಾದ ಆರೋಗ್ಯ ಆಯೋಗ ಹೇಳಿದೆ.
12 ಕ್ಕೂ ಹೆಚ್ಚು ದೇಶಗಳಲ್ಲಿ ಕೊರೋನಾ ಸೋಂಕು
Follow Us