Tuesday, April 13, 2021

ರಾಜ್ಯದಲ್ಲಿ 108 ಮಕ್ಕಳಿಗೆ ಕೊರೋನಾ ಸೋಂಕು; ಮಕ್ಕಳ ಮೇಲಿರಲಿ ನಿಗಾ

ಬೆಂಗಳೂರು: ಇಷ್ಟು ದಿನ ವೃದ್ಧರನ್ನೇ ಹೆಚ್ಚಾಗಿ ಕಾಡುತ್ತಿದ್ದ ಕೊರೋನಾ ಇದೀಗ 15 ವರ್ಷದೊಳಗಿನ ಮಕ್ಕಳನ್ನು ಕಾಡಲಾರಂಭಿಸಿದೆ.
ರಾಜ್ಯದಲ್ಲಿ ಈಗ ಬರೋಬ್ಬರಿ 108 ಮಕ್ಕಳಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಮಕ್ಕಳಲ್ಲಿ ಕೊರೋನಾ ಸೋಂಕು ವ್ಯಾಪಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಆರಂಭದ ದಿನಗಳಲ್ಲಿ ಕೊರೋನಾ ದೇಶದ ವೃದ್ಧರು, ಯುವಕ-ಯುವತಿಯರಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿತ್ತು. ಜಗತ್ತಿನಲ್ಲೂ ಕೊರೋನಾ ಸೋಂಕಿಗೆ ತುತ್ತಾದ ಮಕ್ಕಳ ಪ್ರಮಾಣ ಕಡಿಮೆಯಿತ್ತು. ಆದರೀಗ ಮಕ್ಕಳಲ್ಲೂ ಕೊರೋನಾ ಸೋಂಕು ಅಧಿಕ ಪ್ರಮಾಣದಲ್ಲಿಯೇ ವ್ಯಾಪಿಸುತ್ತಿದೆ.
ದೇಶದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೊರೋನಾ ಬಾಧೆ ಸ್ವಲ್ಪ ಕಡಿಮೆಯಿದ್ದು, ಸೋಂಕಿತರ ಸಂಖ್ಯೆ ಭಾನುವಾರ ಸಂಜೆ (ಮೇ 17) 1147 ರಷ್ಟಿದೆ. ಈ ಪೈಕಿ, 108 ಮಕ್ಕಳು ಕೊರೋನಾ ಸೋಂಕಿನಿಂದ ನರಳುತ್ತಿದ್ದಾರೆ.
ಬೆಂಗಳೂರಲ್ಲಿ 16 ಮಕ್ಕಳು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಬೆಳಗಾವಿಯಲ್ಲಿ 13, ದಾವಣಗೆರೆ 13, ಕಲಬುರಗಿ 13, ಬಾಗಲಕೋಟೆ 10, ಉತ್ತರ ಕನ್ನಡ 8, ವಿಜಯಪುರ 7, ಮಂಡ್ಯ 7, ಹಾಸನ 5, ದಕ್ಷಿಣ ಕನ್ನಡ 3, ಬೀದರ್ 3, ಬಳ್ಳಾರಿಯಲ್ಲಿ ಇಬ್ಬರು ಮಕ್ಕಳಿಗೆ ಕೊರೋನಾ ಸೋಂಕು ಬಾಧಿಸಿದ್ದರೆ, ಮೈಸೂರು, ಉಡುಪಿ, ಬೆಂಗಳೂರು ಗ್ರಾಮಾಂತರ, ತುಮಕೂರು, ಧಾರವಾಡ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ತಲಾ ಓರ್ವ ಮಕ್ಕಳಲ್ಲಿ ಕೊರೋನಾ ಮಹಾಮಾರಿ ಸೋಂಕಿರುವುದು ದೃಢಪಟ್ಟಿದೆ.
ಮಕ್ಕಳು ಮನೆಯಲ್ಲೇ ಇರಲಿ:
ಹೊರ ರಾಜ್ಯಗಳಿಂದ ಬಂದಿರುವ ಮಕ್ಕಳಲ್ಲಿಯೇ ಕೊರೋನಾ ಸೋಂಕು ಹೆಚ್ಚಾಗಿ ಕಾಣಿಸುತ್ತಿದ್ದು, ಕೊರೋನಾ ಸೋಂಕಿಗೆ ತುತ್ತಾಗಿರುವ ತಂದೆ-ತಾಯಿಯಿಂದಲೇ ಸಾಕಷ್ಟು ಮಕ್ಕಳಿಗೆ ಕೊರೋನಾ ಸೋಂಕು ವ್ಯಾಪಿಸಿದೆ. ರಾಜ್ಯದಲ್ಲಿ ಪತ್ತೆಯಾಗಿರುವ ಸಾವಿರ ಪ್ರಕರಣಗಳ ಪೈಕಿ ಶೇ.10ರಷ್ಟು ಮಕ್ಕಳೇ ಮಹಾಮಾರಿಗೆ ತುತ್ತಾಗಿದ್ದಾರೆ. ಹೀಗಾಗಿಯೇ ಆರೋಗ್ಯ ಇಲಾಖೆ 10 ವರ್ಷದೊಳಗಿರುವ ಮಕ್ಕಳನ್ನು ಮನೆಯಿಂದ ಹೊರಗೆ ಬಾರದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದೆ.

ಮತ್ತಷ್ಟು ಸುದ್ದಿಗಳು

Latest News

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ...

ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ

newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ  ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...

ಭಾರತದಲ್ಲಿ ಈ ಬಾರಿ ಕೂಡ ಸಾಮಾನ್ಯ ಮುಂಗಾರು: ಸ್ಕೈಮೆಟ್ ಭವಿಷ್ಯ

newsics.com ಪುಣೆ: ಸತತ ಮೂರನೆ ವರ್ಷ ಕೂಡ ಭಾರತದಲ್ಲಿ  ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಭವಿಷ್ಯ ನುಡಿದಿದೆ. ಜೂನ್ ನಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುವ ಮುಂಗಾರು...
- Advertisement -
error: Content is protected !!