newsics.com
ನವದೆಹಲಿ: ಕೊರೋನಾ ನೋವು ನಮ್ಮನ್ನು ಸದಾ ಕಾಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಆದರೆ, ಭಾರತ ಲಸಿಕೆಗಾಗಿ ಬೇರೆ ದೇಶಗಳ ಮೇಲೆ ಅವಲಂಬಿತವಾಗಿಲ್ಲ. ವಿಶ್ವದ ದೊಡ್ಡ ಲಸಿಕಾ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ. ಇದನ್ನು ಹೆಮ್ಮೆಯಿಂದ ಹೇಳುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಅಮೃತ ಸ್ವಾತಂತ್ರ್ಯೋತ್ಸವ ದಿನವಾದ ಭಾನುವಾರ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ಈವರೆಗೆ 54 ಕೋಟಿ ಜನ ಕೊರೋನಾ ಲಸಿಕೆ ಪಡೆದುಕೊಂಡಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ ಜನರಿಗೆ ಸೋಂಕು ತಗುಲಿದೆ. ನಮ್ಮಿಂದ ಬಹಳಷ್ಟು ಜನರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಕೊರೊನಾದಿಂದ ಎಷ್ಟೋ ಮಕ್ಕಳು ಅನಾಥರಾಗಿದ್ದಾರೆ. ಕೊರೋನಾ ನೋವು ನಮ್ಮನ್ನು ಯಾವಾಗಲೂ ಕಾಡುತ್ತಿದೆ ಎಂದರು.
ಭಾರತ ವಿಕಾಸ ಯಾತ್ರೆಯಲ್ಲಿ ಹೊಸ ಸಂಕಲ್ಪಗಳೊಂದಿಗೆ ನಾವು ಮುನ್ನಡೆಯಬೇಕಾಗಿದೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಶ್ರದ್ಧೆಯೊಂದಿಗೆ ನಾವೆಲ್ಲ ಜೊತೆಯಾಗಿದ್ದೇವೆ. ಇದರೊಂದಿಗೆ ‘ಸಬ್ ಕಾ ಪ್ರಯಾಸ್’ ಘೋಷಣೆಯೂ ನಮ್ಮದಾಗಬೇಕಿದೆ ಎಂದು ಮೋದಿ ಅಭಿಪ್ರಾಯಪಟ್ಟರು.
ದೇಶದ ಪ್ರಜಾತಂತ್ರ ಈಗ ಪಕ್ವವಾಗಿದೆ ಎಂದ ಪ್ರಧಾನಿ ಮೋದಿ, ವಿಶ್ವ ಭೂಪಟದಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನ ದೊರೆತಿದೆ. ಜಾಗತಿಕ ನಾಯಕತ್ವ ವಹಿಸಿಕೊಳ್ಳುವ ಸಮಯ ಇದೀಗ ಭಾರತದ್ದಾಗಿದ್ದು, ನಾವು ಅದಕ್ಕೆ ಸಿದ್ಧವಾಗಿದ್ದೇವೆ ಎಂದರು.
ಟೋಕಿಯೋ ಒಲಂಪಿಕ್ಸ್‌ನಲ್ಲಿ ಸಾಧನೆ ಮಾಡಿದ ಭಾರತೀಯ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, ನಮ್ಮ ಕ್ರೀಡಾಪಟುಗಳು ಯುವ ಭಾರತಕ್ಕೆ ಸ್ಫೂರ್ತಿ ಎಂದು ಶ್ಲಾಘಿಸಿದರು.
ಮಧ್ಯರಾತ್ರಿ ಬಂದ ಸ್ವಾತಂತ್ರ್ಯವನ್ನು ಹಗಲಿರುಳೂ ಕಾಯೋಣ: ಸಿಎಂ ಬೊಮ್ಮಾಯಿ
ಸ್ವಾತಂತ್ರ್ಯದ ಅಮೃತ ಮಹೋತ್ಸವ: ಒಂದೂವರೆ ಕೋಟಿ ಭಾರತೀಯರಿಂದ ರಾಷ್ಟ್ರಗೀತೆ
ಹಿರಿಯ ಯಕ್ಷಗಾನ ಪ್ರಸಂಗಕರ್ತ, ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಇನ್ನಿಲ್ಲ