ನವದೆಹಲಿ: ವಿಶ್ವಾದ್ಯಂತ ಆತಂಕ ಹುಟ್ಟಿಸಿರುವ ಕೊರೊನ ವೈರಸ್ ಅಡ್ಡ ಪರಿಣಾಮ ಭಾರತದ ಮೇಲೂ ಆಗಿದ್ದು, ಔಷಧಗಳು ದುಬಾರಿಯಾಗಿವೆ.
ಚೀನಾದಿಂದ ಭಾರತಕ್ಕೆ ಆಮದು ಸ್ಥಗಿತಗೊಂಡಿರುವುದರಿಂದ ಭಾರತದಲ್ಲಿ ನೋವು ನಿವಾರಕವಾಗಿ ಬಳಸುವ ಪ್ಯಾರಸಿಟಮಲ್ ಔಷಧ ಬೆಲೆ ಶೇ.40, ರೋಗ ನಿರೋಧಕ ಮಾತ್ರೆ ಅಜಿತ್ರೋ ಮೈಸಿನ್ ಬೆಲೆ ಶೇ.70 ರಷ್ಟು ಹೆಚ್ಚಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬಹಳಷ್ಟು ಔಷಧಗಳ ಬೆಲೆ ಗಗನಮುಖಿಯಾಗಬಹುದು ಎನ್ನಲಾಗಿದೆ. ಭಾರತದಲ್ಲಿ ತಯಾರಾಗುವ ಬಹುತೇಕ ಔಷಧಗಳ ಕಚ್ಚಾವಸ್ತುಗಳು ಚೀನಾದಿಂದ ಆಮದಾಗುತ್ತಿದ್ದು, ಕೊರೊನ ವೈರಸ್ ನಿಂದಾಗಿ ಚೀನಾದಿಂದ ಕಚ್ಚಾವಸ್ತುಗಳ ರಫ್ತು ಸ್ಥಗಿತಗೊಂಡಿರುವುದೇ ಔಷಧಗಳು ದುಬಾರಿಯಾಗಲು ಕಾರಣವಾಗಿದೆ.
ಕೊರೊನ ವೈರಸ್ ಅಡ್ಡ ಪರಿಣಾಮ; ದೇಶದಲ್ಲಿ ಔಷಧಗಳು ದುಬಾರಿ
Follow Us