ಮಾಸ್ಕೋ: ಕೊರೋನಾ ಲಸಿಕೆಯ ಪ್ರಯೋಗ ಪೂರ್ಣಗೊಳಿಸಿ ಅಕ್ಟೋಬರ್ನಲ್ಲೇ ದೇಶಾದ್ಯಂತ ಸಾಮೂಹಿಕ ಲಸಿಕೆ ಅಭಿಯಾನ ನಡೆಸಲು ರಷ್ಯಾ ಸಿದ್ಧವಾಗಿದೆ. ಮೊದಲಿಗೆ ವೈದ್ಯರು ಮತ್ತು ಶಿಕ್ಷಕರಿಗೆ ಈ ಲಸಿಕೆ ಸಿಗಲಿದೆ.
ರಷ್ಯಾ ಆರೋಗ್ಯ ಸಚಿವ ಮಿಖಾಯಿಲ್ ಮುರಶೊ ಅವರೇ ಈ ಮಾಹಿತಿ ನೀಡಿದ್ದಾರೆ. ಮಾಸ್ಕೋದಲ್ಲಿರುವ ಸರ್ಕಾರಿ ಸ್ವಾಮ್ಯದ ಸಂಶೋಧನಾ ಕೇಂದ್ರ ಗಮ ಲೇಯಾ ಇನ್ಸ್ಟಿಟ್ಯೂಟ್ ಲಸಿಕೆಯನ್ನು ಮಾನವನ ಮೇಲೆ ಪ್ರಯೋಗಿಸುವ ಹಂತಗಳನ್ನು ಪೂರ್ಣಗೊಳಿಸಿದೆ. ಪ್ರಸ್ತುತ ಲಸಿಕೆಯ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವ ಮುರಶೊ ಹೇಳಿದ್ದಾರೆ. ಅಕ್ಟೋಬರ್ನಿಂದ ವ್ಯಾಪಕ ಲಸಿಕೆ ಅಭಿಯಾನ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೊರೋನಾಗೆ ಸಚಿವೆ ಬಲಿ
ರಷ್ಯಾದ ನೇರ ಹೂಡಿಕೆ ನಿಧಿ ಮುಖ್ಯಸ್ಥ ಕಿರಿಲ್ ಡಿಮಿಟ್ರಿವ್ ಅವರು ಕೋವಿಡ್ ಲಸಿಕೆ ಅಭಿವೃದ್ಧಿಯನ್ನು ಸೋವಿಯತ್ ಒಕ್ಕೂಟವು 1957ರಲ್ಲಿ ಜಗತ್ತಿನ ಮೊದಲ ಉಪಗ್ರಹ ಉಡಾವಣೆ ಮಾಡಿ ಇತಿಹಾಸ ಸೃಷ್ಟಿಸಿದ ಘಟನೆಗೆ ಹೋಲಿಸಿದ್ದಾರೆ. ರಷ್ಯಾದಲ್ಲಿ ಈ ವರೆಗೆ 8.45 ಲಕ್ಷ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 14,058 ಮಂದಿ ಸಾವಿಗೀಡಾಗಿದ್ದಾರೆ.
ಕೊರೋನಾಕ್ಕೆ ಆಯುಷ್ ವೈದ್ಯಾಧಿಕಾರಿ ಬಲಿ
100 ಲಸಿಕೆ ಪ್ರಯೋಗ
ಭಾರತವೂ ಸೇರಿದಂತೆ ವಿವಿಧ ದೇಶಗಳು ಒಟ್ಟಾರೆ 100ಕ್ಕೂ ಅಧಿಕ ಲಸಿಕೆಗಳ ಪ್ರಯೋಗದಲ್ಲಿ ತೊಡಗಿವೆ. ಈ ಪೈಕಿ 4 ಲಸಿಕೆಗಳು (ಚೀನಾದ 3, ಬ್ರಿಟನ್ನ 1) ಮಾತ್ರ ಮಾನವನ ಮೇಲಿನ ಮೂರನೇ ಹಂತದ ಪ್ರಯೋಗದಲ್ಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.