ನವದೆಹಲಿ: ಕೊರೋನಾ ಆಟಾಟೋಪದಿಂದ ಕಂಗೆಟ್ಟಿರುವ ಭಾರತೀಯರಿಗೆ ಕೇಂದ್ರ ಆರೋಗ್ಯ ಸಚಿವ ಹರ್ಷವಧನ್ ಸಮಾಧಾನಕರ ಸುದ್ದಿಯೊಂದನ್ನು ನೀಡಿದ್ದು, 2021 ರ ಆರಂಭದಲ್ಲಿ ಭಾರತಕ್ಕೆ ಕೊರೋನಾ ಲಸಿಕೆ ಲಭ್ಯವಾಗುವ ನೀರಿಕ್ಷೆ ಇದೆ ಎಂದಿದ್ದಾರೆ.
ರಾಜ್ಯಸಭೆಗೆ ಕೊರೋನಾ ಸ್ಥಿತಿಗತಿಗಳ ಕುರಿತು ವಿವರಣೆ ನೀಡಿದ ಹರ್ಷವರ್ಧನ್, ಪ್ರತಿನಿತ್ಯ ದೇಶದಲ್ಲಿ ಸರಾಸರಿ 90 ಸಾವಿರದಷ್ಟು ಪ್ರಕರಣಗಳು ವರದಿಯಾಗುತ್ತಿವೆ. ಸಾವಿನ ಸಂಖ್ಯೆಯೂ ಪ್ರತಿನಿತ್ಯ ಏರುತ್ತಿದೆ. ಚೇತರಿಕೆಯ ಸಂಖ್ಯೆಯೂ ಸಮಾಧಾನಕರವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ತಮ್ಮ ತಜ್ಞರ ತಂಡ ಸಂಶೋಧನೆ ಕೈಗೊಂಡಿದೆ. ಹೊಸ ವರ್ಷದ ಆರಂಭಕ್ಕೆ ಭಾರತದಲ್ಲಿ ಲಸಿಕೆ ಬಳಕೆಗೆ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.
ಕೇಂದ್ರ ಆರೋಗ್ಯ ಸಚಿವರ ಹೇಳಿಕೆ ಕೊರೋನಾ ಆತಂಕದ ನಡುವೆ ಜನರಿಗೆ ಸಮಾಧಾನ ತಂದಿದ್ದು, ಇತರ ರಾಷ್ಟ್ರಗಳಲ್ಲೂ ಲಸಿಕೆಗಾಗಿ ಸಂಶೋಧನೆಗಳು ಚುರುಕುಗೊಂಡಿವೆ. ಭಾರತದಲ್ಲಿಯೂ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, 50 ಲಕ್ಷದ ಗಡಿ ದಾಟಿದೆ. ಈ ವೇಳೆಯಲ್ಲಿ ಲಸಿಕೆ ಕುರಿತು ಹೊರಬಿದ್ದ ಸಕಾರಾತ್ಮಕ ಮಾಹಿತಿ ಜನರ ಸ್ಥೈರ್ಯ ಹೆಚ್ಚಿಸಿದೆ.
2021 ಕ್ಕೆ ಭಾರತೀಯರಿಗೆ ಸಿಗಲಿದೆ ಕೊರೋನಾ ವಾಕ್ಸಿನೇಶನ್
Follow Us