Tuesday, July 5, 2022

ಮದುವೆಯಾಗಿ 6 ವರ್ಷವಾದರೂ ಫಸ್ಟ್ ನೈಟ್ ಆಗಿಲ್ಲವೆಂದ ಸಂಸದ, ತಾರಾ ದಂಪತಿಗೆ ಕೋರ್ಟ್ ತರಾಟೆ

Follow Us

newsics.com

ಒಡಿಶಾ: ಗಂಡ- ಹೆಂಡತಿಯರಿಬ್ಬರೂ ಸೆಲೆಬ್ರಿಟಿಗಳು. ಮನೆಯೊಳಗೆ‌ ಜಗಳವಾಡಿ ಸಾಕಾಗಿ ಡಿವೋರ್ಸ್‌ಗೆ ಅರ್ಜಿ ಹಾಕಿದರೂ ಇವರ ಜಗಳ ನಿಂತಿಲ್ಲ. ನಾಲ್ಕು ಗೋಡೆ ನಡುವಿನ ಜಗಳವನ್ನು ಸೋಷಿಯಲ್ ಮೀಡಿಯಾ ವೇದಿಕೆಯಲ್ಲೂ ಮುಂದುವರಿಸಿದ್ದಾರೆ. ಇದಕ್ಕಾಗಿ ಕೋರ್ಟ್‌ನಿಂದ ಇಬ್ಬರೂ ಛೀಮಾರಿ ಹಾಕಿಸಿಕೊಂಡಿದ್ದಾರೆ.
ಒಡಿಶಾ ಸಂಸದ ಅನುಭವ್ ಮೊಹಂತಿ ಹಾಗೂ ನಟಿ ವರ್ಷಾ ಪ್ರಿಯದರ್ಶಿನಿ ನಡುವಿನ ದಾಂಪತ್ಯ‌ ಜೀವನ ಅಂತ್ಯವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಡಿವೋರ್ಸ್ ಕೇಸ್ ನಡೆಯುತ್ತಿದ್ದರೂ ಇವರಿಬ್ಬರ ಜಗಳ ಮಾತ್ರ ನಿಲ್ಲುತ್ತಲೇ ಇಲ್ಲ. ಈ ಸೆಲೆಬ್ರಿಟಿಗಳ ಡಿವೋರ್ಸ್ ಪ್ರಕರಣ ಕೇವಲ ಕೋರ್ಟ್ ಕಟಕಟೆಯಲ್ಲಿ ಮಾತ್ರ ನಿಂತಿಲ್ಲ, ಬೀದಿ ಜಗಳವಾಗಿಬಿಟ್ಟಿದೆ.

ಈ ಬೀದಿಜಗಳವೋ ಅತ್ಯಂತ ಅಸಹನೀಯವಾಗಿಯೇ ನಡೆಯುತ್ತಿದೆ. ಪುಕ್ಕಟೆ ಮನರಂಜನೆ ನೀಡುವಷ್ಟು ಇವರ ಜಗಳ ರೋಚಕವಾಗಿದೆ.

ಮದುವೆಯಾಗಿ ಆರು ವರ್ಷವಾದರೂ ಈವರೆಗೆ ಲೈಂಗಿಕ ಸಂಪರ್ಕವೇ ಸಾಧ್ಯವಾಗಿಲ್ಲ ಎನ್ನುವ ಮೂಲಕ ಅನುಭವ್ ಮೊಹಂತಿ ತಮ್ಮ ಬೆಡ್ ರೂಂ ಸೀಕ್ರೆಟ್‌ನ್ನೂ ಬಹಿರಂಗಪಡಿಸಿದ್ದಾರೆ. ಇವರ ಕಚ್ಚಾಟ ನೋಡಿದ ಕೋರ್ಟ್ ಇಬ್ಬರಿಗೂ ಗಂಭೀರ ಎಚ್ಚರಿಕೆ ನೀಡಿದೆ.

ಅನಭವ್ ಮೊಹಂತಿ ಹಾಗೂ ವರ್ಷಾ ಪ್ರಿಯದರ್ಶಿನಿ ವಿಚ್ಚೇದನ ಕೇಸ್ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದರೂ ಸಾಮಾಜಿಕ ಜಾಲತಾಣಧಲ್ಲಿ ಅನುಭವ್ ಮೊಹಂತಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಾನು ಮದುವೆಯಾಗಿ 6 ವರ್ಷ ಕಳೆದಿದ್ದು, ಈವರೆಗೂ ಫಸ್ಟ್ ನೈಟ್ ನಡೆದೇ ಇಲ್ಲ. ದಾಂಪತ್ಯ ಜೀವನದಲ್ಲಿ ಲೈಂಗಿಕತೆ ಅವಿಭಾಜ್ಯ ಅಂಗವಾಗಿದೆ. ಆದರೆ ಪತ್ನಿ 6 ವರ್ಷಗಳಿಂದ ಲೈಂಗಿಕ ಸಂಪರ್ಕವನ್ನು ನಿರಾಕರಿಸುತ್ತಲೇ ಬಂದಿದ್ದಾಳೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಸಂಸಾರ ಉಳಿಸಿಕೊಳ್ಳಲು ಕಳೆದ 6 ವರ್ಷಗಳಿಂದ ಪ್ರಯತ್ನಿಸಿದ್ದೇನೆ. ಇನ್ನು ಇಂತಹ ಪ್ರಯತ್ನ ಸಾಧ್ಯವಿಲ್ಲ. ಪತ್ನಿಯ ಅಸಲಿ ಮುಖವನ್ನು ಮುಂದಿನ ವಿಡಿಯೋದಲ್ಲಿ ಬಹಿರಂಗಪಡಿಸುತ್ತೇನೆ ಎಂದು ಅನುಭವ್ ಮೊಹಂತಿ ಹೇಳಿದ್ದಾರೆ.

ಇದರಿಂದ ಆತಂಕಕ್ಕೊಳಗಾದ ನಟಿ ವರ್ಷಾ ಪ್ರಿಯದರ್ಶಿನಿ, ಸಾಮಾಜಿಕ ಜಾಲತಾಣಗಳಲ್ಲಿ ತನ್ಮ‌ ಪತಿ ಅನುಭವ್‌ ಮೊಹಂತಿ ಇಲ್ಲಸಲ್ಲದ ಆರೋಪ‌ ಮಾಡುತ್ತಿದ್ದಾರೆ. ಈ‌ ಮೂಲಕ ನನ್ನ ಮಾನಹಾನಿಗೆ ಯತ್ನಿಸುತ್ತಿದ್ದಾರೆ‌. ಹೀಗಾಗಿ ತನ್ನ ಬಗ್ಗೆ ಯಾವುದೇ ವಿಡಿಯೋ ಅಥವಾ ಪೋಸ್ಟ್ ಹಾಕದಂತೆ ನಿರ್ಬಂಧ ವಿಧಿಸಬೇಕೆಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ವಿಚಾರಣೆಗೆ ಹಾಜರಾದ ಅನುಭವ್ ಮೊಹಂತಿ ಹಾಗೂ ವರ್ಷಾ ಪ್ರಿಯದರ್ಶಿನಿಗೆ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಡಿವೋರ್ಸ್ ಅರ್ಜಿ ವಿಚಾರಣೆ ಹಂತದಲ್ಲಿದೆ. ಈ ವಿಚಾರಣೆ ಅಂತ್ಯವಾಗುವವರೆಗೂ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ವಿಡಿಯೋ ಅಥವಾ ಪೋಸ್ಟ್ ಹಾಕದಂತೆ ಸೂಚಿಸಿದೆ.

ಈ‌ ಮಧ್ಯೆ, ಮೇ 22 ಹಾಗೂ ಮೇ 25 ರಂದು ಪತಿ ಅನುಭವ್ ಮೊಹಂತಿ ವಿರುದ್ಧ ನಟಿ ಪ್ರಿಯದರ್ಶಿನಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕೇಸ್ ದಾಖಲಿಸಿದ್ದಾರೆ.

ಈಕೆಯನ್ನು ನೋಡಿಯಾದರೂ ನಮ್ಮ ನಾಯಕರು ಪಾಠ ಕಲಿಯಬಹುದೇ?

ತಪ್ಪೊಪ್ಪಿಗೆ ಆಧಾರದ ಮೇಲೆ ಅಪರಾಧ ನಿರ್ಧರಿಸಬಾರದು : ಸುಪ್ರೀಂಕೋರ್ಟ್

ಎಂ.ಕರುಣಾನಿಧಿ ಕಂಚಿನ ಪ್ರತಿಮೆ ಅನಾವರಣ

ಮತ್ತಷ್ಟು ಸುದ್ದಿಗಳು

vertical

Latest News

ಕಾಲಿಗೆ ನಮಸ್ಕಾರ ಮಾಡುವ ನಾಟಕ: ಚಂದ್ರಶೇಖರ್ ಗುರೂಜಿಗೆ 70 ಬಾರಿ ಇರಿದ ದುಷ್ಕರ್ಮಿಗಳು

newsics.com ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಮೇಲೆ ದುಷ್ಕರ್ಮಿಗಳು 70 ಬಾರಿ ಇರಿದು ಹತ್ಯೆ ಮಾಡಿದ್ದಾರೆ.  ಅತ್ಯಂತ ಭೀಕರವಾಗಿ ಚುಚ್ಚಿ ಚುಚ್ಚಿ ಹತ್ಯೆ ಮಾಡಲಾಗಿದೆ. ಇಬ್ಬರು...

ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಸ್ಪೈಸ್ ಜೆಟ್

newsics.com ನವದೆಹಲಿ:  ದೆಹಲಿಯಿಂದ  ದುಬೈಗೆ ಪ್ರಯಾಣಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನ ತಾಂತ್ರಿಕ ದೋಷದ ಕಾರಣ ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ  ಮಾಡಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ತಕ್ಷಣ ಪೈಲಟ್ ಕರಾಚಿ ವಿಮಾನ ನಿಲ್ದಾಣ...

ಚಾಕು ಇರಿದು ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕೊಲೆ

newsics.com ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಕೊಲೆಯಾಗಿದ್ದಾರೆ. ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸರಳ ವಾಸ್ತು ಸಲಹೆ ನೀಡುವ ಮೂಲಕ ಹಲವರ ಬಾಳಿಗೆ...
- Advertisement -
error: Content is protected !!