newsics.com
ನವದೆಹಲಿ: 2021ರ ಮೊದಲ ತ್ರೈಮಾಸಿಕದ ವೇಳೆಗೆ ಕೋವಿಡ್ 19 ಲಸಿಕೆ ಸಿದ್ಧವಾಗಬಹುದು ಎಂದಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ತಾವೇ ಮೊದಲು ಈ ಲಸಿಕೆ ಪಡೆಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಭಾನುವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಕೊರೋನಾ ವಿರುದ್ಧ ಲಸಿಕೆಯನ್ನು ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಹೆಚ್ಚಿನ ಅಪಾಯದ ವಲಯದಲ್ಲಿ ಕೆಲಸ ಮಾಡುತ್ತಿರುವವರಿಗೆ ನೀಡಲಾಗುವುದು ಎಂದರು.
ಇದಕ್ಕೂ ಮೊದಲು, ಲಸಿಕೆಗಳ ಸುರಕ್ಷತೆಯ ಅಂಶಗಳ ಬಗ್ಗೆ ಇರುವ ಆತಂಕ ನಿವಾರಿಸಲು ಸಿದ್ಧವಾಗಲಿರುವ ಲಸಿಕೆಯನ್ನು ತಾವೇ ಮೊದಲು ಪಡೆಯುವುದಾಗಿ ಹೇಳಿದರು.
ಲಸಿಕೆ ಬಿಡುಗಡೆಗೆ ಸಂಬಂಧಪಟ್ಟಂತೆ ಯಾವುದೇ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲವಾದರೂ, 2021ರ ಮೊದಲ ತ್ರೈಮಾಸಿಕದ ವೇಳೆಗೆ ಲಸಿಕೆ ಸಿದ್ಧವಾಗುವ ಸಾಧ್ಯತೆಯಿದೆ. ಭಾರತೀಯ ಪ್ರಯೋಗಾಲಯಗಳು (ಖಾಸಗಿ ಅಥವಾ ಸಾರ್ವಜನಿಕ) ಮತ್ತು ಆಸ್ಪತ್ರೆಗಳಲ್ಲಿನ ಹಲವಾರು ಲಸಿಕೆಗಳಿಗೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ಪ್ರಯೋಗಗಳು ನಡೆಯುತ್ತಿವೆ ಎಂದು ಹರ್ಷವರ್ಧನ್ ತಿಳಿಸಿದರು.
ಜಗತ್ತಿನ ಹಲವು ದೇಶಗಳಲ್ಲಿ ಲಸಿಕೆ ಹಿಂಜರಿಕೆ ಹೆಚ್ಚುತ್ತಿದೆ ಎಂದು ಬ್ರಿಟಿಷ್ ಜರ್ನಲ್ ‘ದಿ ಲ್ಯಾನ್ಸೆಟ್’ನಲ್ಲಿ ಇತ್ತೀಚೆಗೆ ಪ್ರಕಟವಾದ ಅಧ್ಯಯನ ವರದಿ ಹೇಳಿದೆ. ಪಾಕಿಸ್ತಾನ, ಇಂಡೋನೇಷ್ಯಾ ಮತ್ತು ದಕ್ಷಿಣ ಕೊರಿಯಾದೊಂದಿಗೆ ಹೋಲಿಸಿದರೆ ಭಾರತ ಸೇರಿ ಇತರ ದೇಶಗಳಲ್ಲಿ ಹಿಂಜರಿಕೆ ಅತ್ಯಂತ ಕಡಿಮೆ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೊರೋನಾದಿಂದ ಗುಣಮುಖರಾದ ಬಳಿಕವೂ ಮಾರ್ಗಸೂಚಿ ಪಾಲನೆಗೆ ಸಲಹೆ
ಕೇಂದ್ರದ ಮಾಜಿ ಸಚಿವ ರಘುವಂಶ್ ಪ್ರಸಾದ್ ಸಿಂಗ್ ಇನ್ನಿಲ್ಲ