newsics.com
ಇಸ್ಲಾಮಾಬಾದ್: ಇಂಟರ್ ಸಿಟಿ ಚಾಂಪಿಯನ್ ಶಿಪ್ ಗಾಗಿ ಆಯ್ಕೆ ಮಾಡಲಾದ ತಂಡದಲ್ಲಿ ಸ್ಥಾನ ಸಿಗದ ಕಾರಣ ಪಾಕಿಸ್ತಾನಿ ದೇಶೀಯ ಕ್ರಿಕೆಟಿಗ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವೇಗದ ಬೌಲರ್ ಶೋಯೆಬ್ ಬಾತ್ ರೂಮ್ ನಲ್ಲಿ ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡಿದ್ದು, ಮಂಗಳವಾರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು,ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಇಂಟರ್-ಸಿಟಿ ಚಾಂಪಿಯನ್ ಶಿಪ್ಗಾಗಿ ಟ್ರಯಲ್ಸ್ ನಲ್ಲಿ ತನ್ನ ತರಬೇತುದಾರರಿಂದ ಆಯ್ಕೆಯಾಗದ ನಂತರ ಶೋಯೆಬ್ ಖಿನ್ನತೆಯಿಂದ ತನ್ನ ಕೋಣೆ ಸೇರಿದ್ದು ಹೊರಗೆ ಬರುತ್ತಿರಲಿಲ್ಲ ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದರು.
ಜಮ್ಮು ಕಾಶ್ಮೀರದಲ್ಲಿ 11 ಪ್ರವಾಸಿಗರು, ಇಬ್ಬರು ಮಾರ್ಗದರ್ಶಿಗಳು ನಾಪತ್ತೆ