ರಾಮೇಶ್ವರಂ: ತಮಿಳುನಾಡಿನಲ್ಲಿ ‘ಕಾ ಕಾ ಬಿರಿಯಾನಿ’ ಈಗ ಸದ್ದು ಮಾಡುತ್ತಿದೆ.
ರಾಮೇಶ್ವರಂನ ದೇವಸ್ಥಾನದಲ್ಲಿ ಆಹಾರ ಸೇವಿಸಿದ ಕಾಗೆಗಳು ಸಾಯುತ್ತಿದ್ದುದನ್ನು ಗಮನಿಸಿದ ಭಕ್ತರು ದೇವಸ್ಥಾನದ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು.
ಪರಿಶೀಲಿಸಿದಾಗ ಈ ಕಾಗೆಗಳು ವಿಷಮಿಶ್ರಿತ ಆಹಾರ ಸೇವಿಸಿ ಸಾಯುತ್ತಿವೆ ಎಂಬುದು ಗೊತ್ತಾಗಿದೆ. ಹೀಗೆ ಸತ್ತ ಕಾಗೆಗಳನ್ನು ಮಾಂಸ ಮಾರಾಟಗಾರರಿಗೆ ಮಾರಾಟ ಮಾಡುತ್ತಿದ್ದ ವಿಚಾರ ಬೆಳೆಕಿಗೆ ಬಂದಿದೆ. ತನಿಖೆ ನಡೆಸಿದ ಪೊಲೀಸರು ಕಾಗೆಗಳ ಹಂತಕರನ್ನು ಸೆರೆ ಹಿಡಿದಿದ್ದಾರೆ. ಕೆಲ ರೆಸ್ಟೋರೆಂಟ್ಗಳಲ್ಲಿ ತಯಾರಾಗುತ್ತಿದ್ದ ಚಿಕನ್ ಲಾಲಿಪಾಪ್ ಹಾಗೂ ಚಿಕನ್ ಬಿರಿಯಾನಿಗೆ ಕಾಗೆಗಳ ಮಾಂಸವನ್ನು ಬೆರೆಸಲಾಗುತ್ತಿದೆ ಎಂಬ ಆತಂಕಕಾರಿ ವಿಚಾರವನ್ನು ಕಾಗೆ ಹಂತಕರಿಂದ ಪೊಲೀಸರು ಬಾಯಿಬಿಡಿಸಿದ್ದಾರೆ.
ಕಾಗೆ ಹಂತಕರ ಸೆರೆ; ಕಾಕಾ ಬಿರಿಯಾನಿ ಜಾಲ ಪತ್ತೆ
Follow Us