ಬೆಂಗಳೂರು: 8 ಲಕ್ಷಕ್ಕೂ ಅಧಿಕ ವಿವಾಹಿತ ಮಹಿಳೆಯರು ಪತಿಗೆ ಗೊತ್ತಾಗದಂತೆ ಡೇಟಿಂಗ್ ಆಪ್ ಗಳಿಗೆ ರಿಜಿಸ್ಟರ್ ಮಾಡಿಕೊಂಡಿದ್ದಾರೆಂಬ ಸಂಗತಿ ಬಹಿರಂಗವಾಗಿದೆ.
ಬೆಂಗಳೂರಿನ ಮಹಿಳೆಯರೇ ಅತೀ ಹೆಚ್ಚು ಸಂಖ್ಯೆಯಲ್ಲಿ ಈ ರೀತಿ ವಿವಾಹೇತರ ಸಂಬಂಧಕ್ಕಾಗಿ ಡೇಟಿಂಗ್ ಆಪ್ ಗಳ ಮೊರೆ ಹೋಗಿದ್ದಾರೆ ಎಂಬ ಅಂಶ ಬಯಲಿಗೆ ಬಂದಿದೆ. ಕ್ರಿಸ್ಮಸ್ ರಜೆ ಕಳೆದು, ಗಂಡ-ಮಕ್ಕಳೆಲ್ಲಾ ತಮ್ಮ ಕರ್ತವ್ಯಕ್ಕೆ ಹಾಜರಾದ ಮೇಲೆ ಈ ವಿವಾಹಿತ ಮಹಿಳೆಯರು ಪರಪುರುಷರೊಂದಿಗೆ ಸರಸವಾಡಲು ಡೇಟಿಂಗ್ ಆಪ್ ಗಳಿಗೆ ದಾಖಲಾಗಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ.
ದೆಹಲಿ, ಕೋಲ್ಕೊತಾ, ಅಹಮದಾಬಾದ್, ಮುಂಬೈ, ಚಂಡೀಘಡ, ಕೊಚ್ಚಿ, ನೋಯ್ಡಾಗಳನ್ನೂ ಮೀರಿ ಬೆಂಗಳೂರು ಮೊದಲ ಸ್ಥಾನದಲ್ಲಿದೆಯಂತೆ!
ಫ್ರೆಂಚ್ ಮೂಲದ ಗ್ಲೀಡನ್ ಎಂಬ ವಿವಾಹೇತರ ಸಂಬಂಧ ಕಲ್ಪಿಸುವ ಆ್ಯಪ್ನಲ್ಲಿ ಹೊಸ ವರ್ಷ ಆರಂಭವಾದಾಗಿನಿಂದ ಈವರೆಗೆ 8 ಲಕ್ಷಕ್ಕೂ ಹೆಚ್ಚು ಮಂದಿ ನೋಂದಾಯಿಸಿಕೊಂಡಿದ್ದಾರೆ. ಆನ್ಲೈನ್ ಡೇಟಿಂಗ್ ಆ್ಯಪ್ ಗ್ಲೀಡನ್, ಹೆಣ್ಣುಮಕ್ಕಳಿಗಾಗಿ ರೂಪಿಸಿದೆ. ಇದಕ್ಕೆ ಸದಸ್ಯರಾಗುವವರ ಸಂಖ್ಯೆ ಶೇ.300ರಷ್ಟು ಹೆಚ್ಚಿದೆ ಎಂದು ವರದಿಯಾಗಿದೆ.