Saturday, April 17, 2021

ಶತಾಯುಷಿ ತಾಯಿಯನ್ನೇ ಮಂಚದಸಹಿತ ಬ್ಯಾಂಕ್’ಗೆ ಕರೆತಂದ ಮಗಳು!

ನೌಪಾರಾ (ಒಡಿಸ್ಸಾ): ಗರೀಬ್ ಕಲ್ಯಾಣ ಯೋಜನೆಯ ಹಣ ಪಡೆಯಲು ಮಹಿಳೆಯೊಬ್ಬರು ತನ್ನ ಶತಾಯುಷಿ ತಾಯಿಯನ್ನೇ ಮಂಚದ ಸಹಿತ ಬ್ಯಾಂಕ್ ಗೆ ಕರೆತಂದ ಅಪರೂಪದ ವಿದ್ಯಮಾನ ಒಡಿಸ್ಸಾದಲ್ಲಿ ನಡೆದಿದೆ.
ಒಡಿಸ್ಸಾದ ನೌಪಾರ ಜಿಲ್ಲೆಯ ಬರ್ಗಾಂವ್ ಗ್ರಾಮದ 60 ವರ್ಷದ ಪುಂಜಿಮಾಟಿ ದೇಯಿ ಎಂಬ ಮಹಿಳೆ ತನ್ನ ಶತಾಯುಷಿ ತಾಯಿಯನ್ನು ಮಂಚದಸಹಿತ ಬ್ಯಾಂಕಿಗೆ ಎಳೆದೊಯ್ಯುತ್ತಿರುವತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಮೂರು ತಿಂಗಳಿಗೆ ತಲಾ 500 ರೂಪಾಯಿಗಳಂತೆ ನೀಡುತ್ತಿದ್ದ ಕಂತಿನ ಹಣ 1500 ರೂ. ಪಡೆಯಲು ಹೀಗೆ ಮಾಡಿದ್ದಾಗಿ ಪುಂಜಿಮಾಟಿ ಹೇಳಿದ್ದಾರೆ.
ಶತಾಯುಷಿ ಮಹಿಳೆಯ ಖಾತೆಯಿದ್ದ ಬ್ಯಾಂಕಿನ ಮ್ಯಾನೇಜರ್, ಹಣವನ್ನು ನೀಡಬೇಕಾದರೆ ಖಾತೆದಾರರು ಬ್ಯಾಂಕಿಗೆ ಬರುವುದು ಅನಿವಾರ್ಯವೆಂದು ಹೇಳಿರುವುದೇ ತಾಯಿಯನ್ನು ಕರೆತರಲು ಕಾರಣ ಎಂದು ಶತಾಯುಷಿ ಮಹಿಳೆಯ ಮಗಳು ದೂರಿದ್ದಾರೆ. ಆದರೆ ಜಿಲ್ಲಾಡಳಿತ ಈ ಆರೋಪವನ್ನು ಅಲ್ಲಗಳೆದಿದೆ.
ಶತಾಯುಷಿ ತಾಯಿ ಲಭೇ ಬಘೇಲ್ ಅವರ ಜನಧನ ಖಾತೆಯಿಂದ 1500 ರೂಪಾಯಿಗಳನ್ನು ತೆಗೆಯಲೆಂದು ಮಗಳು ಜೂನ್ 9ರಂದು ಇಲ್ಲಿನ ಉತ್ಕಲ್ ಗ್ರಾಮೀಣ ಬ್ಯಾಂಕಿಗೆ ತೆರಳಿದ್ದರು. ಆದರೆ ಬ್ಯಾಂಕಿನ ಮ್ಯಾನೇಜರ್ ಅಜಿತ್ ಪ್ರಧಾನ್ ಅವರು, ಈ ಬ್ಯಾಂಕ್ ಖಾತೆ ತಾಯಿಯ ಹೆಸರಲ್ಲಿರುವುದರಿಂದ ಆಕೆಯನ್ನು ಕರೆತಂದರೆ ಮಾತ್ರವೇ ಹಣ ನೀಡುವುದಾಗಿ ಹೇಳಿದ್ದರಿಂದಲೇ ತಾನು ಹೀಗೆ ಮಾಡಬೇಕಾಯಿತು ಎಂದು ಮಗಳು ಪುಂಜಿಮಾಟಿ ದೇಯಿ ತಿಳಿಸಿದ್ದಾರೆ. ಆದರೆ ನೌಪಾರಾ ಜಿಲ್ಲಾಧಿಕಾರಿ ಮಧುಸ್ಮಿತ ಸಾಹೂ, ಪರಿಶೀಲನೆಗೆ ಬ್ಯಾಂಕ್ ನಿಂದಲೇ ಅಧಿಕಾರಯಿಗಳನ್ನು ಕಳುಹಿಸುವುದಾಗಿ ಹೇಳಿದ್ದರೂ ಗಡಿಬಿಡಿಯಿಂದ ತಾಯಿಯನ್ನೇ ಬ್ಯಾಂಕ್ ಗೆ ಕರೆತಂದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಕುಂಭಮೇಳದ ಪ್ರಧಾನ ಸಾಧು ಕೊರೋನಾಗೆ ಬಲಿ

newsics.com ಹರಿದ್ವಾರ: ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಸಾಧು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 65 ವರ್ಷದ ಸಾಧು ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕುಂಭಮೇಳಕ್ಕೆ ಮಧ್ಯಪ್ರದೇಶದಿಂದ...

ಬೆಂಗಳೂರು ವಿವಿ ಪರೀಕ್ಷೆಗಳು‌ ಮುಂದೂಡಿಕೆ

newsics.com ಬೆಂಗಳೂರು: ಕೊರೋನಾ ಅಬ್ಬರ ಹಾಗೂ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಶೀಘ್ರದಲ್ಲೇ ಮುಂದಿನ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಏ.19, 20, 21ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ...

ಪಂಜಾಬ್ ವಿರುದ್ಧ ಚೆನ್ನೈಗೆ ಸುಲಭದ ಗೆಲುವು

newsics.com ಮುಂಬೈ: ಐಪಿಎಲ್ 2021ರ ಆವೃತ್ತಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲರ್ಗಳ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ಹೀನಾಯ ಸೋಲು ಅನುಭವಿಸಿತು. ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್ ಗೆಲುವು ಗಳಿಸಿದೆ. 106 ರನ್ಗಳ...
- Advertisement -
error: Content is protected !!