Monday, March 8, 2021

ಬೆಂಗಾಲ್ ಟೈಗರ್’ಗಳಿಗೆ ರೇಡಿಯೋ ಕಾಲರ್ ಅಳವಡಿಕೆಗೆ ನಿರ್ಧಾರ

newsics.com
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಸುಂದರ್‍ಬನ್ ಟೈಗರ್ ರಿಸರ್ವ್‍ನಲ್ಲಿರುವ ಗಂಡು ಹುಲಿಗಳ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಲು ರೇಡಿಯೋ ಕಾಲರ್ ಅಳವಡಿಸಲು ಅರಣ್ಯ ಇಲಾಖೆ ಮುಂದಾಗಿದೆ.
ರೇಡಿಯೋ ಕಾಲರ್ ಅಳವಡಿಕೆ ಸೇಫ್‍ಗಾರ್ಡ್ ಟೈಗರ್ ಅಭಿಯಾನದ ಉಪಕ್ರಮವಾಗಿದ್ದು, ಇದರಿಂದ ದೊಡ್ಡ ಬೆಕ್ಕುಗಳ ಆವಾಸಸ್ಥಾನ ಹಾಗೂ ಬಳಕೆಯ ಮಾದರಿಯನ್ನು ಮತ್ತು ಅವುಗಳ ವರ್ತನೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗಲಿದೆ ಎಂದು ಇಲಾಖೆಯ ಮುಖ್ಯ ವನ್ಯಜೀವಿ ವಾರ್ಡನ್ ವಿ.ಕೆ.ಯಾದವ್ ತಿಳಿಸಿದ್ದಾರೆ.
ಹುಲಿ ಮತ್ತು ಮನುಷ್ಯನ ನಡುವಿನ ಸಂವಹನವನ್ನು ರೇಡಿಯೋ-ಟೆಲಿಮೆಟ್ರಿ ಮೂಲಕ ಡಿ.27 ಮತ್ತು 28 ರಂದು ಮೌಲ್ಯಮಾಪನ ಮಾಡಲಾಗಿದ್ದು, ಈ ಕಾರ್ಯಾಚರಣೆಯನ್ನು ಹರಿಖಾಲಿ ಅರಣ್ಯದ ಬಾಶಿರತ್ ವಲಯದಲ್ಲಿ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಂವಹನ ಚಟುವಟಿಕೆಗಳ ಮೇಲ್ವಿಚಾರಣೆಯನ್ನು ನಾವು ಉಪಗ್ರಹ ಕಳಿಸುವ ದತ್ತಾಂಶಗಳ ಮೇಲೆ ಮಾಡುತ್ತೇವೆ. ವಿಶ್ವ ವನ್ಯಜೀವಿ ನಿಧಿ (ಡಬ್ಲ್ಯುಡಬ್ಲ್ಯುಎಫ್) ಸಹ ಈ ಮೇಲ್ವಿಚಾರಣೆ ಕಾರ್ಯದಲ್ಲಿ ತೊಡಗಿದೆ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲೂ ಶಕ್ತಿಯುತ ಹೊಸ ಕೊರೋನಾ ವೈರಸ್ ಪತ್ತೆ

ಮುಳುಗಿದ ದೋಣಿ: 17 ಮಂದಿ ನಾಪತ್ತೆ, ಸಾವನ್ನಪ್ಪಿರುವ ಶಂಕೆ

ಒಂದೇ ವೇದಿಕೆಯಲ್ಲಿ ಪಿಹೆಚ್’ಡಿ ಪದವಿ ಪಡೆದ ಮೂವರು ಸಹೋದರಿಯರು

ಮತ್ತಷ್ಟು ಸುದ್ದಿಗಳು

Latest News

2ನೇ‌ ಮಗುವಿನ ಲಿಂಗದ ಬಗ್ಗೆ ‌ಹೇಳಿಕೊಂಡ ಇಂಗ್ಲೆಂಡ್ ರಾಜ-ರಾಣಿ

newsics.com ಕ್ಯಾಲಿಫೋರ್ನಿಯಾ: ರಾಜಮನೆತನದಿಂದ ಹೊರಬಂದು ಜನಸಾಮಾನ್ಯರಂತೆ ವಾಸಿಸುತ್ತಿರುವ ಇಂಗ್ಲೆಂಡ್​​​ನ​​​ ಯುವರಾಜ ಹ್ಯಾರಿ ಮತ್ತು ಯುವರಾಣಿ ಮೇಘನ್ ಸಂದರ್ಶನದಲ್ಲಿ ಇನ್ನು ಗರ್ಭದಲ್ಲಿರುವ ಎರಡನೇ ಮಗುವಿನ ಲಿಂಗವನ್ನು ಬಹಿರಂಗಪಡಿಸಿದ್ದಾರೆ. ಅಮೆರಿಕದ ಸಂದರ್ಶಕಿ...

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್ʼಗೆ ಶಿಫ್ಟ್

newsics.com ನವದೆಹಲಿ:‌ ಲಂಡನ್ʼನ ಲಾರ್ಡ್ಸ್ʼನಲ್ಲಿ ನಡೆಯಬೇಕಿದ್ದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್ʼಗೆ ಸ್ಥಳಾಂತರವಾಗಿದೆ.ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೋಮವಾರ (ಮಾ.8) ಈ ಮಾಹಿತಿ ನೀಡಿದ್ದಾರೆ....

ಗುಜರಾತ್, ರಾಜಸ್ಥಾನದ ಮಾಜಿ ರಾಜ್ಯಪಾಲ ಅನ್ಶುಮಾನ್ ಸಿಂಗ್ ನಿಧನ

newsics.com ಲಕ್ನೋ: ರಾಜಸ್ಥಾನ ಮತ್ತು ಗುಜರಾತಿನ ಮಾಜಿ ರಾಜ್ಯಪಾಲ, ರಾಜಸ್ಥಾನ ಹೈಕೋರ್ಟ್ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅನ್ಶುಮಾನ್ ಸಿಂಗ್ (85) ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ (ಮಾ.8) ಲಕ್ನೋದಲ್ಲಿ ಕೊನೆಯುಸಿರೆಳೆದರು. 1999-2003ರ ನಡುವೆ...
- Advertisement -
error: Content is protected !!