Wednesday, July 6, 2022

ಗಾಳಿಯ ಗುಣಮಟ್ಟ ಕುಸಿತ; ಜನರ ಆಯುಷ್ಯ 2 ವರ್ಷ ಕ್ಷೀಣ

Follow Us

ಪ್ಯಾರಿಸ್: ಗಾಳಿಯ ಗುಣಮಟ್ಟ ಕುಸಿತವಾಗಿರುವುದರಿಂದ ಮನುಷ್ಯರ ಆಯುಷ್ಯ ಎರಡು ವರ್ಷ ಕಡಿಮೆಯಾಗಿದೆ ಎಂದು ವೈಜ್ಞಾನಿಕ ಅಧ್ಯಯನ ತಿಳಿಸಿದೆ.
ಹೆಚ್ಚಿನ ಜನರು ಉಸಿರಾಡುವ ಗಾಳಿಯ ಗುಣಮಟ್ಟವು ಅವರ ಆರೋಗ್ಯಕ್ಕೆ ಕೋವಿಡ್-19ಕ್ಕಿಂತಲೂ ಹೆಚ್ಚಿನ ಅಪಾಯವನ್ನು ಒಡ್ಡುತ್ತಿದೆ ಎಂದು ಸಂಶೋಧನೆಯಲ್ಲಿ ಭಾಗವಹಿಸಿರುವ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ವಾಯುಮಾಲಿನ್ಯದಿಂದ ಭೂಮಿಯ ಮೇಲಿನ ಪ್ರತಿ ಪುರುಷ, ಮಹಿಳೆ ಮತ್ತು ಮಗುವಿನ ಆಯುಷ್ಯವನ್ನು ಸುಮಾರು ಎರಡು ವರ್ಷಗಳಷ್ಟು ಕಡಿಮೆ ಮಾಡುತ್ತದೆ ಎಂದು ಮಂಗಳವಾರ ಬಿಡುಗಡೆಗೊಂಡ ವೈಜ್ಞಾನಿಕ ಅಧ್ಯಯನವೊಂದು ಹೇಳಿದೆ.
ಭಾರತ ಮತ್ತು ಬಾಂಗ್ಲಾದೇಶಗಳಂಥ ದೇಶಗಳಲ್ಲಿ ವಾಯು ಮಾಲಿನ್ಯವು ಎಷ್ಟು ತೀವ್ರವಾಗಿದೆ ಎಂದರೆ, ಅದರ ಪರಿಣಾಮವಾಗಿ ಕೆಲವು ಪ್ರದೇಶಗಳಲ್ಲಿ ಜನರ ಸರಾಸರಿ ಆಯುಷ್ಯವು 10 ವರ್ಷಗಳಷ್ಟು ಕಡಿಮೆಯಾಗಿದೆ.
ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಿಂದ ಉಂಟಾಗುವ ವಾಯುಮಾಲಿನ್ಯವು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ವರದಿ ಹೇಳಿದೆ. ಕಳಪೆ ವಾಯು ಗುಣಮಟ್ಟವು ಮಾನವನ ಆರೋಗ್ಯಕ್ಕೆ ಅತ್ಯಂತ ದೊಡ್ಡ ಅಪಾಯವಾಗಿದೆ ಎಂದು ಪರಿಣತರು ತಮ್ಮ ಅಧ್ಯಯನ ವರದಿ ‘ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್’ನಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ನಿಡಸೋಸಿ ಮಠದ ಶಿವಲಿಂಗೇಶ್ವರ ಸ್ವಾಮೀಜಿಗಳ ಕಾರು ಅಪಘಾತ

newsics.com ಧಾರವಾಡ; ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಿಡಸೋಸಿ ಮಠದ ಶಿವಲಿಂಗೇಶ್ವರ ಸ್ವಾಮೀಜಿಗಳ ಕಾರು ಅಪಘಾತವಾಗಿದೆ. ನಿಡಸೋಶಿಗೆ ಮರಳುವಾಗ ದುರ್ಘಟನೆ ಸಂಭವಿಸಿದೆ. ಸ್ವಾಮೀಜಿಗಳು ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ...

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಶಿಖರ್ ಧವನ್ ನಾಯಕ

newsics.com ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಬ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಶಿಖರ್...

ಸೂಫಿ ಬಾಬಾ ಖ್ಯಾತಿಯ ಆಧ್ಯಾತ್ಮಿಕ ನಾಯಕ ಖ್ವಾಜಾ ಸಯ್ಯದ್ ಚಿಶ್ತಿ ಗುಂಡಿಕ್ಕಿ ಹತ್ಯೆ

newsics.com ನಾಸಿಕ್: ಮಹಾರಾಷ್ಟ್ರದ ನಾಸಿಕ್ನಲ್ಲಿ 'ಸೂಫಿ ಬಾಬಾ' ಎಂದೇ ಖ್ಯಾತರಾಗಿದ್ದ ಆಧ್ಯಾತ್ಮಿಕ ನಾಯಕ ಖ್ವಾಜಾ ಸಯ್ಯದ್ ಚಿಶ್ತಿ (35) ಅವರನ್ನು ಮಂಗಳವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ತಲೆಗೆ ಗುಂಡು ತಗುಲಿದ ತಕ್ಷಣವೇ ಮೃತಪಟ್ಟಿದ್ದಾರೆ. ಕೊಲೆಗಾರರು ಕೂಡಲೇ...
- Advertisement -
error: Content is protected !!