ಮುಂಬೈ: ಮಾದಕ ದ್ರವ್ಯ ಜಾಲದ ತನಿಖೆ ನಡೆಸುತ್ತಿರುವ ಎನ್ ಸಿ ಬಿ ವಿಚಾರಣೆಗೆ ಖ್ಯಾತ ನಟಿ ದೀಪಿಕಾ ಪಡುಕೋಣೆ ಹಾಜರಾಗಿದ್ದಾರೆ. ಇದೀಗ ಅವರ ವಿಚಾರಣೆ ಮುಂದುವರಿದಿದೆ. ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರಿಶ್ಮಾ ಪ್ರಕಾಶ್ ಜತೆಗಿನ ಮಾದಕ ದ್ರವ್ಯ ನಂಟಿನ ಬಗ್ಗೆ ದೀಪಿಕಾ ಅವರನ್ನು ಪ್ರಶ್ನಿಸುವ ಸಾಧ್ಯತೆಗಳಿವೆ.
ಕರಿಶ್ಮಾ ಎಷ್ಟು ಬಾರಿ ಮಾದಕ ದ್ರವ್ಯಗಳನ್ನು ನಿಮ್ಮಗೆ ಪೂರೈಸಿದ್ದಾರೆ.. ಅದನ್ನು ನೀವು ಇತರರಿಗೆ ನೀಡಿದ್ದೀರಾ .. ಎಷ್ಟು ಪ್ರಮಾಣದ ಮಾದಕ ದ್ರವ್ಯ ಖರೀದಿಸಿದ್ದೀರಿ.. ಇತ್ಯಾದಿ ಪ್ರಶ್ನೆಗಳನ್ನು ಎನ್ ಸಿ ಬಿ ಕೇಳುವ ಸಾಧ್ಯತೆಯಿದೆ.
ದೀಪಿಕಾ ಪಡುಕೋಣೆ ತಮ್ಮ ಮ್ಯಾನೇಜರ್ ಕರಿಶ್ಮಾ ಪ್ರಕಾಶ್ ಮೂಲಕ ಮಾದಕ ದ್ರವ್ಯ ಖರೀದಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಇದೇ ವೇಳೆ ಕರಿಶ್ಮಾ ಮತ್ತು ದೀಪಿಕಾ ಅವರನ್ನು ಜತೆಯಲ್ಲಿ ಕೂರಿಸಿ ಎನ್ ಸಿ ಬಿ ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸುವ ಸಾಧ್ಯತೆ ಕೂಡ ಇದೆ.