newsics.com
ಚೆನ್ನೈ(ತಮಿಳುನಾಡು): ಚೆನ್ನೈನಲ್ಲಿ ನಾಲ್ಕು ಸಿಂಹಗಳಿಗೆ ಡೆಲ್ಟಾ ಕೊರೋನಾ ಸೋಂಕು ತಗುಲಿದೆ.
ಸಿಂಹಗಳು ಪ್ಯಾಂಗೋಲಿನ್ ವಂಶಾವಳಿ ಬಿ.1.617.2ಗೆ ಸೇರಿವೆ ಮತ್ತು ಡೆಲ್ಟಾ ರೂಪಾಂತರಗಳಾಗಿವೆ ಎಂದು ಭೋಪಾಲ್ʼನ ಐಸಿಎಆರ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ-ಸೆಕ್ಯುರಿಟಿ ಅನಿಮಲ್ ಡಿಸೀಸ್ (ಎನ್‌ಐಎಚ್‌ಎಸ್‌ಎಡಿ) ಬಹಿರಂಗಪಡಿಸಿದೆ.
ಚೆನ್ನೈನ ಅರಿಗ್ನಾರ್ ಅನ್ನಾ ಝೂಲಾಜಿಕಲ್ ಪಾರ್ಕ್ ಮೇ 24ರಂದು 11 ಸಿಂಹಗಳ ಮಾದರಿಗಳನ್ನು ಕಳುಹಿಸಿತ್ತು. ಅದರಲ್ಲಿ 4 ಸಿಂಹಗಳಿಗೆ ಸೋಂಕು ದೃಢಪಟ್ಟಿದೆ. ಮೃಗಾಲಯದ ಉದ್ಯಾನವನವು ಮೇ 29ರಂದು ಭೋಪಾಲ್ʼನ ಎನ್‌ಐಎಚ್‌ಎಸ್‌ಎಡಿಗೆ ಏಳು ಮಾದರಿಗಳನ್ನು ಕಳುಹಿಸಿತ್ತು.
ಡೆಲ್ಟಾ ರೂಪಾಂತರಿ ಸೋಂಕು ಬಲು ಬೇಗ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯಾಗಿ ಆಂಟೋನಿಯೊ ಗುಟೆರೆಸ್ ಪುನರಾಯ್ಕೆ