ಮೈಸೂರು: ರೈತರ ಹಿತಕ್ಕಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡುವೆ. ಈ ಕಾರ್ಯಕ್ಕಾಗಿ ಸಾಲ ಮಾಡಲೂ ಹಿಂಜರಿಯುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಭಾನುವಾರ ಸುತ್ತೂರು ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬಿಎಸ್ ವೈ, ಮಾರ್ಚ್ 5 ರಂದು ತಾವು ಬಜೆಟ್ ಮಂಡಿಸಲಿದ್ದು, ಇತರ ಯೋಜನೆಗಳಿಗೆ ಹಣ ಕಡಿಮೆಯಾದರೂ ಪರವಾಗಿಲ್ಲ. ರೈತರ ಜೀವನದಲ್ಲಿ ಬದಲಾವಣೆ ತರಲು ಬದ್ದನಿರುವುದಾಗಿ ತಿಳಿಸಿದರು.
ಹೆಚ್ಚು ಮಾತನಾಡಿ ಜನರನ್ನು ಖುಷಿಪಡಿಸುವ ಅಗತ್ಯವಿಲ್ಲ. ರೈತ ನೆಮ್ಮದಿಯಿಂದ ಇರಬೇಕು, ಆತನಿಗೆ ಉತ್ತಮ ಬೆಂಬಲ ಬೆಲೆ ಸಿಗಬೇಕು, ಸರ್ಕಾರದ ಖಜಾನೆ ಇರುವುದು ಅನ್ನದಾತರ ಕಣ್ಣೀರು ಒರೆಸಲು ಎಂದರು.
ಸಾಲ ಮಾಡಿಯಾದರೂ ರೈತರ ಹಿತ ಕಾಯುವೆ- ಸಿಎಂ
Follow Us