newsics.com
ಬ್ರಿಟನ್: ಕೊರೋನಾ ಮೂರನೇ ಅಲೆಯ ಆತಂಕದ ನಡುವೆ, ಮತ್ತಷ್ಟು ಪ್ರಬಲವಾಗಿ ಹಾಗೂ ಅತೀ ಹೆಚ್ಚು ಹರಡುವ ಒಮೈಕ್ರಾನ್ ಕೊರೋನಾ ವೈರಸ್ ರೂಪಾಂತರದ ಉಪ ಪ್ರಭೇದವನ್ನು ಇಲ್ಲಿನ ಹೆಲ್ತ್ ಸೆಕ್ಯೂರಿಟಿ ಏಜೆನ್ಸಿ ಪತ್ತೆ ಮಾಡಿದೆ.
ಡೆಲ್ಟಾದಿಂದ ಸುಲಭವಾಗಿ ಪ್ರತ್ಯೇಕಿಸಲು ಸಾಧ್ಯವಾಗಬಲ್ಲ ಒಮೈಕ್ರಾನ್ನೊಂದಿಗೆ ಕಂಡುಬರುವ ನಿರ್ದಿಷ್ಟ ರೂಪಾಂತರವನ್ನು ಹೊಂದಿಲ್ಲದ BA.2 ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ ಎಂದು ಹೆಲ್ತ್ ಏಜನ್ಸಿ ಮಾಹಿತಿ ನೀಡಿದೆ.
ಬ್ರಿಟನ್ನಲ್ಲಿ ಒಮೈಕ್ರಾನ್ ಉಪ ಪ್ರಬೇಧವಾದ BA.2 ಸೋಂಕಿನ 426 ಪ್ರಕರಣಗಳು ಈಗಾಗಲೇ ಪತ್ತೆಯಾಗಿವೆ. ಕೇವಲ ಬ್ರಿಟನ್ ಅಲ್ಲದೇ ಭಾರತ, ಸ್ವೀಡನ್, ಡೆನ್ಮಾರ್ಕ್ ಸೇರಿ ಜಗತ್ತಿನ 40 ರಾಷ್ಟ್ರಗಳಲ್ಲಿ ಈಗಾಗಲೇ ಬಿಎ.2 ಉಪಪ್ರಬೇಧದ ಪ್ರಕರಣಗಳು ಕಾಣಿಸಿಕೊಂಡಿವೆ ಎಂದು ತಿಳಿದುಬಂದಿದೆ.
ಕಲ್ಯಾಣಮಂಟಪಕ್ಕೆ ಡಾನ್ಸ್ ಮಾಡುತ್ತಾ ವಧು ಎಂಟ್ರಿ, ವರನಿಂದ ಕಪಾಳಮೋಕ್ಷ , ಮದುವೆಗೆ ಮೊದಲೇ ಬ್ರೇಕ್ ಅಪ್