newsics.com
ತಿರುಮಲ: ಕೊರೋನಾ ಅಬ್ಬರ ಹಿನ್ನೆಲೆಯಲ್ಲಿ ಏಪ್ರಿಲ್ 12ರಂದು ತಿರುಮಲ ತಿರುಪತಿ ದೇಗುಲದಲ್ಲಿ ಸರ್ವ ದರ್ಶನ ಟೋಕನ್ʼ ವಿತರಣೆ ಸ್ಥಗಿತಗೊಳಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಿರ್ಧರಿಸಿದೆ.
ಏಪ್ರಿಲ್ 12ರಿಂದ ತಿರುಪತಿಯಲ್ಲಿ ಸರ್ವ ದರ್ಶನ ಟೋಕನ್ʼಗಳ ವಿತರಣೆಯನ್ನು ಸ್ಥಗಿತಗೊಳಿಸುತ್ತಿದೆ ಎಂದು ಬುಧವಾರ ಹೇಳಿದೆ.
ಏಪ್ರಿಲ್ 11ರ ಸಂಜೆ ಕೊನೆಯ ಟೋಕನ್ ನೀಡಲಾಗುವುದು ಎಂದು ಟಿಟಿಡಿ ಹೇಳಿದೆ.
ತಿರುಪತಿ ನಗರದಲ್ಲಿ ಕೋವಿಡ್-19 ಪ್ರಕರಣಗಳು ಮತ್ತೆ ಹೆಚ್ಚುತ್ತಿವೆ ಎಂದು ಟಿಟಿಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸಾವಿರಾರು ಯಾತ್ರಿಕರು ಭೂದೇವಿ ಸಂಕೀರ್ಣ ಮತ್ತು ವಿಷ್ಣು ನಿವಾಸಂನಲ್ಲಿ ಸಮಯ ಸ್ಲಾಟ್ ಟೋಕನ್ʼಗಳನ್ನು ಸಂಗ್ರಹಿಸಲು ಕಾಯಬೇಕಾಗುತ್ತದೆ. ಆದ್ದರಿಂದ ಕೋವಿಡ್-19 ಭಕ್ತರಲ್ಲಿ ಹರಡುವ ಸಾಧ್ಯತೆಗಳು ಹೆಚ್ಚು ಎಂದು ಅದು ಸೂಚಿಸಿದೆ.
ಭಕ್ತರ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟಿಟಿಡಿ ಹೇಳಿದೆ.
ಕಳೆದ ತಿಂಗಳ ಕೊನೆಯಲ್ಲಿ ಟಿಟಿಡಿ ಪ್ರತಿದಿನ ನೀಡಲಾಗುವ ಸರ್ವ ದರ್ಶನ ಟೋಕನ್ʼಗಳ ಸಂಖ್ಯೆಯನ್ನು 22,000 ದಿಂದ 15,000ಕ್ಕೆ ಇಳಿಸಲು ನಿರ್ಧರಿಸಿತ್ತು.
ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮರೆಡ್ಡಿ ಅವರು ಕಳೆದ ತಿಂಗಳು ಯಾತ್ರಿಕರಿಗೆ ಮಾಸ್ಕ್ ಧರಿಸಿ ದೇವಾಲಯಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದರು.