ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕರೋನಾ ಅಟ್ಟಹಾಸ ಮುಂದುವರಿದಿದ್ದು 10 ದಿನಗಳ ಲಾಕ್ ಡೌನ್ ನಡುವೆಯೂ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಈ ಮಧ್ಯೆ ಕೊರೋನಾ ಸೋಂಕು ಉಪ ಜಿಲ್ಲಾಧಿಕಾರಿಯನ್ನೇ ಬಲಿ ಪಡೆದಿದೆ.
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಉಪ ಜಿಲ್ಲಾಧಿಕಾರಿ ದೇಬದತ್ತರಾಯ್ (34) ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಇವರಿಗೆ ನಾಲ್ಕು ವರ್ಷದ ಮಗು ಇದೆ.
ಕಳೆದ ವಾರ ಅವರಿಗೆ ಕರೋನಾ ಸೋಂಕು ತಗುಲಿತ್ತು. ಹೀಗಾಗಿ ಅವರನ್ನು ಚಂದನ್’ನಗರದಲ್ಲಿ ಹೋಂ ಕ್ವಾರಂಟೈನ್’ನಲ್ಲಿ ಇಡಲಾಗಿತ್ತು. ಭಾನುವಾರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶ್ರೀರಾಂಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ಸಾವನ್ನಪ್ಪಿದ್ದಾರೆ. 2011 ರ ಬ್ಯಾಚ್ನಲ್ಲಿದ್ದ ದೇಬದತ್ತಾ ಅವರು, ಮೊದಲು ಪುರುಲಿಯಾದಲ್ಲಿ ಬಿಡಿಒ ಆಗಿ ಕೆಲಸ ಮಾಡಿದ್ದರು. ನಂತರ ಅವರನ್ನು ಉಪ ಮ್ಯಾಜಿಸ್ಟ್ರೇಟ್ ಆಗಿ ಚಂದನನಗರಕ್ಕೆ ಸ್ಥಳಾಂತರಿಸಲಾಯಿತು. ವಲಸೆ ಕಾರ್ಮಿಕರ ಆಹಾರ ಮತ್ತು ವಸತಿ ವ್ಯವಸ್ಥೆಯನ್ನು ಇವರೇ ನಿರ್ವಹಿಸುತ್ತಿದ್ದರು, ಆ ಸಮಯದಲ್ಲಿ ಸೋಂಕಿಗೆ ಒಳಗಾಗಿರಬಹುದೆಂಬ ಸಂದೇಹವಿದೆ.
ಕೊರೋನಾಗೆ ಮತ್ತೊಬ್ಬ PSI ಬಲಿ